ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ತದಾನ ಪ್ರಾಣದಾನಕ್ಕೆ‌ ಸಮ;ಜಿಲ್ಲಾ ನ್ಯಾಯಾಧೀಶ ಮಾರುತಿ ಬಾಗಡೆ

ಹುಬ್ಬಳ್ಳಿ: ವೈದ್ಯಕೀಯ ಸಂಕಷ್ಟದ ಸಂದರ್ಭದಲ್ಲಿ ರಕ್ತ ಅಗತ್ಯವಾಗಿರುತ್ತದೆ. ರಕ್ತದಾನ ಮಾಡುವುದು ಪ್ರಾಣದಾನ ಮಾಡುವುದಕ್ಕೆ ಸಮವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಕಾರ್ಮಿಕ‌ ನ್ಯಾಯಾಲಯದ ಅಧ್ಯಕ್ಷಾಧಿಕಾರಿಗಳಾದ ಮಾರುತಿ ಬಾಗಡೆ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹುಬ್ಬಳ್ಳಿ ಕಿಮ್ಸ್, ಪೊಲೀಸ್ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ, ನೂತನ ನ್ಯಾಯಾಲಯ ಸಂಕೀರ್ಣ‌ದಲ್ಲಿ, 75 ನೇ ಸ್ವಾತಂತ್ರ್ಯ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು. ಶಿಬಿರ ಸಂಜೆಯವರೆಗೆ ನಡೆಯಲಿದ್ದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ, ನ್ಯಾಯಾಧೀಶರು, ವಕೀಲರು, ಪೊಲೀಸ್ ಹಾಗೂ ಇತರೆ ಸಿಬ್ಬಂದಿಗಳು ಅಧಿಕ ಪ್ರಮಾಣದಲ್ಲಿ ರಕ್ತದಾನ ಮಾಡುತ್ತಿರುವುದು ಸಂತಸ ತಂದಿದೆ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ‌ ಇಡೀ ರಕ್ತ, ಕೆಂಪು ರಕ್ತ ಕಣಗಳು, ಪ್ಲಾಸ್ಮಾ ಅವಶ್ಯಕವಾಗಿ ಬೇಕಾಗುತ್ತವೆ ಎಂದರು.

Edited By : Nirmala Aralikatti
Kshetra Samachara

Kshetra Samachara

09/11/2021 03:17 pm

Cinque Terre

15.64 K

Cinque Terre

3

ಸಂಬಂಧಿತ ಸುದ್ದಿ