ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅಗಲಿಕೆಗೆ ಕುಂದಗೋಳದಲ್ಲಿ ಕಂಬನಿ

ಕುಂದಗೋಳ : ಪವರಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಕುಂದಗೋಳ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು.

ಕುಂದಗೋಳ ಪಟ್ಟಣದ ಕನಕದಾಸ ವೃತ್ತದ ಬಳಿ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಮೇಶ್ ಇಂಗಳಹಳ್ಳಿ, ಉಪಾಧ್ಯಕ್ಷರಾದ ಸುರೇಶ್ ಶಾನಭಾಗ, ನಗರ ಘಟಕದ ಅಧ್ಯಕ್ಷ ಮಂಜು ಪೂಜಾರಿ ಸೇರಿದಂತೆ ಸರ್ವ ಅಭಿಮಾನಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/10/2021 05:39 pm

Cinque Terre

15.24 K

Cinque Terre

0

ಸಂಬಂಧಿತ ಸುದ್ದಿ