ಕುಂದಗೋಳ : ಕನ್ನಡ ಚಿತ್ರರಂಗದ ಧೀಮಂತ ನಟ ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶುಕ್ರವಾರ ಹೃದಯಾಘಾತದಿಂದ ನಿಧನರಾಧ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕುಂದಗೋಳ ತಾಲೂಕ ಪತ್ರಕರ್ತರ ಸಂಘ ಹಾಗೂ ಸಮಸ್ತ ಕುಂದಗೋಳ ಮುಖಂಡರ ನೇತೃತ್ವದಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಉಪಸ್ಥಿತಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಂತಾಪ ಗೌರವ ಸೂಚಿಸಲಾಯಿತು.
ಈ ವೇಳೆ ಕುಂದಗೋಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ್ ಘೋರ್ಪಡೆ ಮಾತನಾಡಿ ಪುನೀತ್ ರಾಜಕುಮಾರ್ ತಮ್ಮ 46ನೇ ವಯಸ್ಸಿನಲ್ಲಿ ನಿಧರಾಗಿರುವುದು ಚಿತ್ರರಂಗವಷ್ಟೇ ಅಲ್ಲಾ ಇಡೀ ಕನ್ನಡನಾಡಿಗೆ ಎಂದು ತುಂಬಲಾರದ ನಷ್ಟ ಎಂದರು.
Kshetra Samachara
30/10/2021 05:36 pm