ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು ಬೆಳಿಗ್ಗೆ 9 ರಿಂದ ಸಮಯ 10 ಗಂಟೆ 30 ನಿಮಿಷವಾದರೂ ಯಾವುದೇ ಹಳ್ಳಿ ಮತ್ತು ನಗರ ಸಾರಿಗೆ ಬಸ್'ಗಳು ಬಸ್ ನಿಲ್ದಾಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಾರಿಗೆ ನಿರ್ವಾಹಕರ ಜೊತೆ ವಾಗ್ವಾದ ನಡೆಯಿತು.
ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಬಿದ್ದ ಬಳಿಕ ಹಾಗೂ ಬೆಳಿಗ್ಗೆ ಶಾಲಾ, ಕಾಲೇಜು ಕೆಲಸಕ್ಕೆ ಹುಬ್ಬಳ್ಳಿಗೆ ತೆರಳುವ ಪ್ರಯಾಣಿಕರಿಗೆ ಕಳೆದ ಹಲವು ದಿನಗಳಿಂದ ಸಮರ್ಪಕ ಬಸ್ ಇರದೆ ತೊಂದರೆ ಆಗುತ್ತಿದ್ದು, ಇಂದು ಬರೋಬ್ಬರಿ 1 ಗಂಟೆ 30 ನಿಮಿಷವಾದರೂ ಬಸ್ ನಿಲ್ದಾಣಕ್ಕೆ ಯಾವುದೇ ಬಸ್ ಬಾರದ ಕಾರಣ ಜನ ಹಾಗೂ ವಿದ್ಯಾರ್ಥಿಗಳು ಸಾರಿಗೆ ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.
ಈ ವೇಳೆ ಬಸ್ ನಿಲ್ದಾಣದ ತುಂಬಾ ವಿದ್ಯಾರ್ಥಿಗಳ ದಂಡು ಜಮಾಯಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಪಬ್ಲಿಕ್ ನೆಕ್ಸ್ಟ್ ವಿಡಿಯೋ ಕಳುಹಿಸಿ ಸಂಬಂಧಪಟ್ಟ ಅಧಿಕಾರಿಗಳು ಗಮನಿಸುವಂತೆ ಕೋರಿದ್ದಾರೆ.
Kshetra Samachara
29/10/2021 11:27 am