ನವಲಗುಂದ : ನಡು ರಸ್ತೆಯಲ್ಲಿ ನಿಂತ ಬಸ್ ಗಳು, ಆಕ್ರೋಶದಿಂದ ಬಸ್ ಗಳ ಎದುರು ನಿಂತ ವಿದ್ಯಾರ್ಥಿಗಳು, ಇದೆಲ್ಲ ನಡೆದದ್ದು, ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ.
ಈ ಮಾರ್ಗದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಗುರುವಾರ ಬೆಳಿಗ್ಗೆ ಹಣಸಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು, ನವಲಗುಂದ ಡಿಪೋ ವ್ಯವಸ್ಥಾಪಕರು ಮತ್ತು ಸ್ಥಳೀಯ ಜನಪ್ರತಿನಿದಿನಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಒಂದು ಗಂಟೆಗೂ ಹೆಚ್ಚು ಸಮಯ ಬಸ್ ತಡೆದ ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಬಸ್ ಗಳ ಸಂಚಾರಕ್ಕೂ ಸಮಸ್ಯೆ.
ಇನ್ನು ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಇದರಿಂದ ಶಾಲಾ ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ಮಾಡಿದರು.
ಈ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತರುತ್ತಲೇ, ಹೆಚ್ಚುವರಿ ಬಸ್ ನಿಯೋಜನೆ ಮಾಡುವುದಾಗಿ ತಿಳಿಸಿದ್ದಾರೆ.
Kshetra Samachara
28/10/2021 12:34 pm