ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌರಶಕ್ತಿ ಬಳಕೆ ಮತ್ತು ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಜಾಗೃತಿ ಹಾಗೂ ಚರ್ಚಾ ಕಾರ್ಯಕ್ರಮ

ಧಾರವಾಡ- ಉನ್ನತ ಭಾರತ ಅಭಿಯಾನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಸೇಲ್ಕೋ ಸೋಲಾರ್ ಪ್ರೈ. ಲಿ. ಧಾರವಾಡ ಇವರ ಸಹಭಾಗಿತ್ವದಲ್ಲಿ ಉ.ಭಾ.ಅ ದತ್ತು ಗ್ರಾಮವಾದ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದಲ್ಲಿ ಸೌರಶಕ್ತಿ ಬಳಕೆಯ ಹಾಗೂ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಜಾಗೃತಿ ಹಾಗೂ ರೈತರೊಂದಿಗೆ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಉ.ಭಾ.ಅ. ಕೋಶದ ಸಂಯೋಜಕರಾದ ಡಾ. ಎನ್ ರಾಮಾಂಜನೇಯಲು ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು, ಕೃಷಿ ಭೂಮಿ ನಾಶವಾಗುವದನ್ನು ತಡೆಗಟ್ಟಬಹುದು ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಸ್ವ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬನೆಯ ಜೀವನ ಸಾಗಿಸಬಹುದು ಎಂದರು.

ಸೇಲ್ಕೋ ಸೋಲಾರ್ ಧಾರವಾಡ ಮುಖ್ಯ ವ್ಯವಸ್ಥಾಪರಾದ ಸುರೇಶ ಸಾವಳಗಿ ಯವರು ಸೌರಶಕ್ತಿ ಬಳಕೆಯಿಂದಾಗುವ ಅನುಕೂಲತೆಗಳ ಬಗ್ಗೆ ತಿಳಿಸುತ್ತಾ, ಕುಲಕಸಬುಗಳು ನಶಿಸಿ ಹೋಗುತ್ತಿರುವದನ್ನು ಸೌರಶಕ್ತಿ ಬಳಕೆಯಿಂದ ತಡೆಯಬಹುದು ಇದರಿಂದ ಗುಡಿಕೈಗಾರಿಕೆ ಮತ್ತು ಕುಶಲಕರ್ಮಿಗಳಿಗಾಗುವ ಅನುಕೂಲತೆಗಳ ಬಗ್ಗೆ ತಿಳಿಸುತ್ತಾ ಹಾಗೂ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಮತ್ತು ಸೌರಶಕ್ತಿ ಬಳಕೆಯ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಪ್ರಮುಖ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಉ. ಬಾ. ಅ. ಸಿಬ್ಬಂದಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Edited By : Nirmala Aralikatti
Kshetra Samachara

Kshetra Samachara

28/10/2021 07:28 am

Cinque Terre

70.98 K

Cinque Terre

0

ಸಂಬಂಧಿತ ಸುದ್ದಿ