ಹುಬ್ಬಳ್ಳಿ : ನಮಸ್ಕಾರೀ ಹುಬ್ಬಳ್ಳಿ ಮಂದಿಗೆ ಮತ್ತೇನೂ ಪಾಲಿಕೆ ಚುನಾವಣೆಗೆ ವೋಟ್ ಹಾಕಿ ನಿಮ್ಮೂರ ಈ ಛೋಟಾ ಮುಂಬೈ ಅಭಿವೃದ್ಧಿ ದಾರಿ ನೋಡಾಕತ್ತಿರೇನು ? ನೀವೂ ದಾರಿ ನೋಡ್ತಾ ಇದ್ದೀರಿ ಏನು ? ನೀವೂ ನೋಡಿದಷ್ಟು ರಸ್ತೆಗಳು ಪಾಟಿ ತಗ್ಗು ಗುಂಡಿ ಬಿದ್ದ್ ಹಾಳಾಗಿ ಹೋಗಾತಾವ್ ಹೊರತು ಉದ್ಧಾರ ಆಗಲ್ಲ.
ಹೌದು ರೀ ! ನಮ್ಮ ಜನಪ್ರತಿನಿಧಿಗಳು ಬಿ.ಆರ್.ಟಿ.ಎಸ್ ಬಸ್ ಸ್ಟಾಂಡ್ ಕಟ್ಟಸ್ಯಾರ್ ಖರೇ, ಅಲ್ಲಿ ಬಸ್ ಹೋಗಾಕ್ ಚಲೋ ರಸ್ತೆ ಮಾಡಿಸಿಲ್ಲ ನೋಡ್ರಿ, ನೀವೂ ಹಿಂಗ್ ಹೊಸೂರು ನಿಲ್ದಾಣದ ಮುಂದಿನ ದಾರಿ ಒಳಗ್ ಈ ಬಸ್ಸು ಕಾರು ಬೈಕ್ ಆಟೋದಾಗ ಹೋದ್ರಿಪಾ ಅಂದ್ರ, ಒಂದ್ ನಮೂನಿ ಗುಡ್ಡಾ ಏರಿದ ಪೀಲ್ ಬರತೇತಿ ನೋಡ್ರಿ.
ಆ ಪಾಟಿ ತಗ್ಗು ಗುಂಡಿ ಬಿದ್ದಾವ್, ಅದರಾಗ್ ಈ ಬಸ್ಸು ಕಾರು ಬೈಕ್ ಮೋಟಾರು ಹೊಂಟಾವ್ ಈ ಪರಿಸ್ಥಿತಿಗೆ ಹಿಡಿ ಡಾಂಬರ್ ಹಾಕಾಕ್ ಯಾರು ದಿಕ್ಕಿಲ್ಲಾ.
ಆ ಮ್ಯಾಗ್ ಈ ರಸ್ತೆ ಬಾಜು ಒಂದು ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆ, ಇನ್ನೋಂದು ಜನರಲ್ ಆಸ್ಪತ್ರೆ ಐತಿ ಪಾಪಾ ಆಂಬುಲೆನ್ಸ್ ಒಳಗೆ ಬರೋ ರೋಗಿಗಳು ಹಾಗೂ ಗರ್ಭಿಣಿಯರ ಕಥಿ ಏನ್ರೀ.
ಒಟ್ಟಾರೆ ನೋಡ್ರಿ ನಮ್ಮ ಹುಬ್ಬಳ್ಳಿ ಮಹಾನಗರದ ರಸ್ತೆಗಳು ಮೃತ್ಯುಕೂಪ ಆಗ್ಯಾವ್ ನೀವೂ ಗಾಡಿ ಓಡಿಸುವಾಗ ಹುಷಾರು ಇರ್ರೀ ನಮ್ಮ ಮಂದಿ.
Kshetra Samachara
27/10/2021 03:40 pm