ಧಾರವಾಡ: ನೋಡ್ರಿ ಇಲ್ಲೆ. ಒಂದ ವಾರದ ಹಿಂದ ಈ ಗುಂಡಿ ಸಂಬಂಧ ನಾವು ಸುದ್ದಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಾ ಸೆಳದಿದ್ವಿ. ಆದ್ರ, ಆ ಸುದ್ದಿ ಅವರ ಕಣ್ಣಿಗೆ ಬಿದ್ದೈತ್ಯೋ ಇಲ್ಲೋ ಗೊತ್ತಿಲ್ಲ. ಸುದ್ದಿ ನೋಡಿದ್ರೂ ನೋಡದಂಗ ಇರಾವ್ರಿಗೆ ಏನ್ ಮಾಡೋದ್ರಿ.
ಇದು ಧಾರವಾಡ ಬಸ್ಸ್ಟ್ಯಾಂಡ್ನಿಂದ ಕಮಲಾಪುರಕ್ಕ ಹೋಗು ರಸ್ತೆ. ರಸ್ತೆದಾಗ ಮಣಕಾಲುದ್ದ ತೆಗ್ಗ ಬಿದ್ದಾವ. ಅದಕ್ಕಷ್ಟ ಡಾಂಬರ್ ಹಾಕಿ ಅನುಕೂಲ ಮಾಡಿಕೊಡ್ರಿ ಅಂತ ನಾವು ಸುದ್ದಿ ಮಾಡಿದ್ವಿ. ಹಃ ಏನ್ ಮಾಡೋದ್ರಿ. ನಮ್ಮನ್ನಾಳವ್ರ ಚರ್ಮಾ ದಪ್ಪ ಐತಿ. ಹಿಂಗಾಗಿ ಮತ್ತೊಮ್ಮೆ ಅದನ್ನ ಸುದ್ದಿ ಮಾಡಿ ಗಮನಾ ಸೆಳಿಬೇಕಾಗೇತಿ ನೋಡ್ರಿ. ನೋಡುಣ ಇನ್ನರ ಸ್ವಲ್ಪ ಇದರ ಕಡೆ ಯಾರರ ಗಮನಾ ಹರಸ್ತಾರೇನೋ ಅಂತ.
Kshetra Samachara
22/10/2021 10:41 pm