ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷತನ..?

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ : ನಮ್ಮ ಅಧಿಕಾರಿಗಳಿಗೆ ಹಿಂಗ್ ಸಮಸ್ಯೆ ಅಯ್ತಿ ನೋಡ್ರಿ ಅಂತಾ ಒಮ್ಮೆ ಹೇಳಿದ್ರೆ ಕೇಳೋದೆ ಇಲ್ಲಾ ಅಂತಾರ್, ಯಾಕಪ್ಪ ಅಂದ್ರೆ ಕಳೆದ ತಿಂಗಳು ನಮ್ಮ ನವಲಗುಂದ ಪಟ್ಟಣದ ಹಳೆ ತಾಲೂಕು ಕಚೇರಿಯಲ್ಲಿ ಪುಂಡರ ಹಾವಳಿ ಇದೇ ಅಂತಾ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿತ್ತು. ಅದಕ್ಕೂ ತಲೆ ಕೆಡಿಸಿಕೊಳ್ಳದೇ ಆರಾಮಾಗಿ ಕೈಕಟ್ಟಿಕೊಂಡು ಕುಳಿತು ಬಿಟ್ಟರ್ ನೋಡ್ರಿ....

ಹೌದ್ರಿ ಆವರಣದಲ್ಲೇ ಧಮ್ ಹೊಡಿಯೋ ದೃಶ್ಯಗಳು ಸಹ ಇಲ್ಲಿ ಸಿಕ್ಕಿದ್ವು, ಇನ್ನು ಬಾಟಲ್ ಗಳು ಎನ್ ಬಿಡ್ರಿ ಎಲ್ಲಿ ನೋಡಿದ್ರು ಸಿಗ್ತಾವ್, ಗುಟಕಾ ಚೀಟ್ ಅಂತೂ ಬೇಕಾದಷ್ಟ ಬಿದ್ದಾವ, ಇನ್ನು ಕಳೆದ ಬಾರಿ ಸುದ್ದಿ ಬಿತ್ತರವಾದಾಗ ಎಷ್ಟ ಮದ್ಯಪಾನ ಬಾಟಲ್ ಗಳು ಇಲ್ಲಿ ಬಿದಿದ್ವೋ, ಈಗ ಅದಕ್ಕಿಂತ ಜಾಸ್ತಿ ಕಂಡು ಬರಾಕತ್ತಾವ್, ಇಂತಾದ್ರಾಗ ಮೂತ್ರನೂ ಇಲ್ಲೇ ಮಾಡ್ತಾರ. ಇಷ್ಟೆಲ್ಲಾ ಸಮಸ್ಯೆ ಐತಿ ಅಂತಾ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕ ತಂದ್ರೂ ಏನು ಉಪಯೋಗ ಆಗಿಲ್ಲ ಅನ್ನೋದ ಬೇಸರದ ಸಂಗತಿ, ಇದ್ರಿಂದ ಇಲ್ಲಿಗೆ ಬರುವ ಸಾರ್ವಜನಿಕರಿಗೂ ತೊಂದರೆ ಆಗಕತೇತಿ, ಇನ್ನು ಎಲ್ಲಕ್ಕಿಂತ ನಾಚಿಕೆಗೇಡಿನ ಸಂಗತಿ ಅಂದ್ರ ಈ ಕಚೇರಿ ಆವರಣದೊಳಗ ಒಂದು ಗುಡಿ ಅಯ್ತ್ರಿ ಆ ಗುಡಿ ಆಜು ಬಾಜುನ ಕುಂತ ಕುಡಿತಾರ ಅಂತಾ ಇಲ್ಲಿ ಬಿದ್ದಿರೋ ಮದ್ಯಪಾನದ ಟೆಟ್ರಾ ಪ್ಯಾಕೆಟ್ ನೋಡಿದ್ರ ಅನಸ್ತೇತಿ, ಒಟ್ಟಾರೆ ಈ ಕಾರ್ಯಾಲಯದ ಆವರಣ ಅವ್ಯವಸ್ಥೆಯಿಂದ ಕುಡೇತಿ, ಈಗಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಬ್ಬಂದಿ ನೇಮಿಸಿ, ಆವರಣದ ನಿರ್ವಹಣೆ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

21/10/2021 04:32 pm

Cinque Terre

45.7 K

Cinque Terre

0

ಸಂಬಂಧಿತ ಸುದ್ದಿ