ಅಣ್ಣಿಗೇರಿ : ಅಖಿಲ ಭಾರತ ಗಾಣಿಗ ಸಂಘದ ನೂತನ ಅಣ್ಣಿಗೇರಿ ತಾಲ್ಲೂಕು ಗಾಣಿಗ ಸಂಘಕ್ಕೆ ಸೋಮವಾರ ಸ್ಥಳೀಯ ಆದಿಕವಿ ಪಂಪಸ್ಮಾರಕ ಭವನದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಮಾತನಾಡಿ, ಗಾಣಿಗ ಸಮುದಾಯದ ಸೇವೆ ದೇಶಕ್ಕೆ ಅವೀಸ್ಮರಣೀಯವಾಗಿದೆ. ಗಾಣಿಗರಲ್ಲಿರುವ ಒಗ್ಗಟ್ಟು ಬೇರೆ ಯಾವ ಸಮುದಾಯದಲ್ಲೂ ಇಲ್ಲ ಎಂದು ಹೇಳಿದರು. ನೂತನ ತಾಲ್ಲೂಕು ಘಟಕಕ್ಕೆ ನೇಮಕಗೊಂಡ ಪದಾಧಿಕಾರಿಗಳು ಸಂಘಟನೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಮುಂದಾಗಬೇಕು. ಗಾಣಿಗ ಸಮುದಾಯದ ಸೇವೆ ಪ್ರತಿ ಸಮುದಾಯಕ್ಕೂ ತಲುಪುವಂತೆ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ನೂತನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನಾಗಪ್ಪ ಗಾಣಿಗೇರ, ಉಪಾಧ್ಯಕ್ಷರಾಗಿ ಕುಮಾರಗೌಡ ಗದ್ದಿಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಚವಡಿ ಅವರನ್ನು ನೇಮಕ ಮಾಡಲಾಯಿತು.
ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಜಗದೀಶ ಗಾಣಿಗೇರ, ಉಪಾಧ್ಯಕ್ಷರಾಗಿ ದೊಡ್ಡಫಕ್ಕಿರಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಚವಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಆದೇಶ ಪ್ರತಿ ನೀಡುವ ಮೂಲಕ ಪದಗ್ರಹಣ ಮಾಡಿದರು.
Kshetra Samachara
18/10/2021 08:03 pm