ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪರ್ಸೆಂಟೇಜ್ ತಿಂದ್ರೂ ಪೇಶೆಂಟ್ ಒಯ್ಯಾಕ್ ಛಲೋ ರಸ್ತೆ ಮಾಡ್ಲಿಲ್ಲೋ ಶಿವ ಶಿವಾ

ಕುಂದಗೋಳ : ನಮಸ್ಕಾರಿ ರೀ ಲೋಕೋಪಯೋಗಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳೇ.

ಇಲ್ಲೇ ಶಿರೂರು ಗ್ರಾಮದಿಂದ ಹಿರೆನೇರ್ತಿ, ಚಿಕ್ಕನೇರ್ತಿ ಬಸಾಪೂರ ಗ್ರಾಮಗಳಿಗೆ ಸಂಪರ್ಕ ಮಾಡೋ 13 ಕಿಲೋ ಮೀಟರ್ ರಸ್ತೆ ಹಾಳಾದ ಪರಿಣಾಮ ಈ ಊರಿಗೆ ಪೇಶೆಂಟ್ ಕರ್ಕೊಂಡು ಹೋಗಾಕ್ ಆಂಬುಲೆನ್ಸ್ ಸಹಿತ್ ಬರವಲ್ವ ಅಂತ್, ಮತ್ತ್ ಈ ಇಲ್ಲಿನ ಮಂದಿಗೆ ಈ ರಸ್ತೆ ಪ್ರಯಾಣ ಮಾಡೋದೋ ಬಾಳ್ ತ್ರಾಸ್ ಆಗೇತಿ ಅಂತ್ ನೋಡ್ರಿ ಪಾ.

ಹೆಸರಿಗೆ ಇಲ್ನೋಡ್ರಿ ಇಷ್ಟ್ ಚೆಂದ್ ಲೋಕಸಭಾ ಸದಸ್ಯರ ಅನುದಾನ ರಸ್ತೆ ರೆಡಿ ಆಗೇತಿ ಅಂತ್ಹೇಳಿ ಬೋರ್ಡ್ ಹಾಕಿರಿ. ಆದ್ ಹೇಂಗ್ ರೆಡಿ ಆಯ್ತೋ ? ಇವಾಗ್ ಹೇಂಗ್ ಕೆಟ್ಟೈತೋ ? ಗೊತ್ತಿಲ್ಲಾ. ಒಟ್ಟ್ ರಸ್ತೆ ಅನ್ನೋದ್ ಈ ಪಾಟಿ ಹಾಳ್ ಮಣ್ಣು ಕಲ್ಲು, ರಾಡಿ, ತುಂಬಿ ಸಂಚಾರಕ್ಕೆ ಸಂಚಕಾರ ತಂದೈತಿ.

ಮತ್ತ್ ಈ ಶಿರೂರು ಬ್ರಿಡ್ಜ್ ಬಿದ್ದಮ್ಯಾಲ್ ಇಲ್ಲೇ ಗಾಡಿ ಬಾಳ್ ಓಡಾಡಿ ಮೊದಲಿನಕ್ಕಿಂತ್ ಜಾಸ್ತಿ ಹಾಳಾಗೇತಿ ಅಂತ್. ಅದಕ್ಕ್ ಲೋಕೋಪಯೋಗಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳೇ ನೀವೋಮ್ಮೆ ಹೋಗಿ ರಸ್ತೆ ನೋಡಿ ಜನಸಾಮಾನ್ಯರ ಪರಿಸ್ಥಿತಿಗೆ ಪರಿಹಾರ ಕೋಡ್ರಲ್ಲಾ.

Edited By : Manjunath H D
Kshetra Samachara

Kshetra Samachara

18/10/2021 06:56 pm

Cinque Terre

16.42 K

Cinque Terre

0

ಸಂಬಂಧಿತ ಸುದ್ದಿ