ಕುಂದಗೋಳ : ತಾಲ್ಲೂಕಿನ ಶಿರೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿಯಿಂದ ರೈತರ ಬೆಳೆಗಳು ಹಾಳಾಗುತ್ತಿವೆ ಕೂಡಲೇ ಅವುಗಳನ್ನು ಮಾಲೀಕರು ಗ್ರಾಮ ಹಿಡಿದುಕೊಂಡು ಹೋಗುವಂತೆ ಪಂಚಾಯತಿ ಅಧ್ಯಕ್ಷ ಅಶೋಕ ಘೋರ್ಪಡೆ ಒತ್ತಾಯಪಡಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಹಂದಿಗಳು ಹಿಂಡು ಹಿಂಡಾಗಿ ಗ್ರಾಮದಲ್ಲಿ ಓಡಾಡುತ್ತಿರುವುದರಿಂದ ರೈತರ ಹೊಲಗಳಲ್ಲಿನ ಬೆಳೆಗಳನ್ನು ಶೇಂಗಾ,ಹಾನಿ ಮಾಡುತ್ತಿವೆ, ಇದರಿಂದ ರೈತರು ಆತಂಕಗೊಳ್ಳುತ್ತಿದ್ದು ಹಂದಿಗಳನ್ನು ಗ್ರಾಮದಲ್ಲಿ ಬಿಟ್ಟ ಮಾಲೀಕರು ವಾರದೊಳಗಾಗಿ ಅವುಗಳನ್ನು ಹಿಡಿದುಕೊಂಡು ಹೋಗಬೇಕು ಇಲ್ಲವಾದರೆ ಮಾಲೀಕರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
18/10/2021 12:11 pm