ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅರೇಬಸನಕೊಪ್ಪ ಗ್ರಾಮದಲ್ಲಿ ಅಪಾಯಕ್ಕೆ ಅಹ್ವಾನ‌ ನೀಡುವ ವಿದ್ಯುತ್ ಟಿ ಸಿ

ಕಲಘಟಗಿ: ಅರೇಬಸನಕೊಪ್ಪ ಗ್ರಾಮದಲ್ಲಿ ವಿದ್ಯುತ್

ಟಿ ಸಿ ಅಪಾಯಕ್ಕೆ ಅಹ್ವಾನ‌ ನೀಡುವಂತೆ ಇದ್ದು,ಅದನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಿದ್ಧಾರೂಢ ದೇವಸ್ಥಾನದ ಹತ್ತಿರ ಇರುವ ವಿದ್ಯುತ್ ಟಿಸಿ ಅಳವಡಿಸಲಾದ ಕಂಬಗಳು ಹಳೆಯದ್ದಾಗಿವೆ ಇದರಿಂದ ಯಾವುದೇ ಸಂದರ್ಭದಲ್ಲಿ ಟಿಸಿ ಬೀಳುವ ಸ್ಥಿತಿಯಲ್ಲಿ ಇದೆ ಹಾಗೂ ರಸ್ತೆಯ ಸನಿಹದಲ್ಲಿ ಇರುವುದರಿಂದ ದನಕರುಗಳು ಹಾಗೂ ಜನರಿಗೆ ಅಪಾಯವನ್ನುಂಟು ಮಾಡುವಂತೆ ಇದ್ದು,ಶೀಘ್ರ ಟಿಸಿ ಬೇರೆಡೆ ಸ್ಥಳಾಂತರ ಮಾಡುವ ಅಗತ್ಯವಿದೆ.

ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ವಿದ್ಯುತ್ ಟಿಸಿ ಸ್ಥಳಾಂತರದ ವಿಷಯವನ್ನು ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಅವರ ಗಮನಕ್ಕೆ ತಂದಿದ್ದು,ತಹಶೀಲ್ದಾರ ಟಿಸಿ ಸ್ಥಳಾಂತರಿಸಲು ಅಧಿಕಾರಿಳಿಗೆ ಸೂಚಿಸಿದ್ದಾರೆ.ಅಧಿಕಾರಿಗಳು ಟಿಸಿಯನ್ನು ಶೀಘ್ರ ಸ್ಥಳಾಂತರಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸವರೇ ಎಂಬುದನ್ನು ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

17/10/2021 09:36 am

Cinque Terre

40.55 K

Cinque Terre

0

ಸಂಬಂಧಿತ ಸುದ್ದಿ