ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಖಲೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ: ಹಕ್ಕುಪತ್ರ ವಿತರಣೆಗೆ ಶೀಘ್ರ ಕ್ರಮ-ಅಬ್ಬಯ್ಯ

ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಮೆಹಬೂಬ್ ನಗರ ಸ್ಲಂ ನಿವಾಸಿಗಳಿಗೂ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

ಇಲ್ಲಿನ ವಾರ್ಡ್ ನಂ.69ರ ಯಲ್ಲಾಪೂರ ಓಣಿಯ ಮೆಹಬೂಬ್ ನಗರಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸ್ಲಂ ನಿವಾಸಿಗಳ ಹಕ್ಕುಪತ್ರ ವಿತರಣೆಗೆ ದಾಖಲೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಕ್ಕುಪತ್ರ ವಿತರಣೆ ಮೆಹಬೂಬ್ ನಗರ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅದಕ್ಕಾಗಿಯೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಮನೆಗಳಿಗೆ ನಂಬರ್ ನೀಡುವ, ನಿವಾಸಿಗಳ ದಾಖಲೆ ಸಂಗ್ರಹಿಸಿ ಕುಟುಂಬದವರ ಫೋಟೋ ಹೊಡೆದು ಶೀಘ್ರ ವರದಿ ನೀಡುವಂತೆ ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಮೆಹಬೂಬ್ ನಗರ ಘೋಷಿತ ಸ್ಲಂ ಪ್ರದೇಶದಲ್ಲಿ ಒಟ್ಟು 333 ಮನೆಗಳಿದ್ದು, ಅಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ದಾಖಲೆಗಳನ್ನು ಸಂಗ್ರಹಿಸಲಿದ್ದು, ದಾಖಲೆ ಸಂಗ್ರಹ ಕಾರ್ಯ ಪೂರ್ಣಗೊಂಡ ಬಳಿಕ ಹಕ್ಕುಪತ್ರ ವಿತರಿಸಿ, ಇಲ್ಲಿನ ನಿವಾಸಿಗಳ ಕನಸನ್ನು ನನಸು ಮಾಡಲಾಗುವುದು ಎಂದು ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

16/10/2021 05:31 pm

Cinque Terre

84.89 K

Cinque Terre

1

ಸಂಬಂಧಿತ ಸುದ್ದಿ