ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಧಿಕಾರಿಗಳ ಎಡವಟ್ಟು! ರಸ್ತೆ ಮತ್ತು ಕಾಂಪ್ಲೆಕ್ಸ್ ಒಳಗೆ ನುಗ್ಗುತ್ತಿದೆ ಕುಡಿ ನೀರು

ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ ಸ್ಮಾರ್ಟ್ ಆಗುತ್ತಿದೆ ನಿಜಾ,,, ಅದು ಹೇಗೆ ಕಾಮಗಾರಿ ಮಾಡ್ತಾ ಇದಾರೆ ಎಂದರೆ. ಸ್ಮಾರ್ಟ್ ಮಾಡುತ್ತಲೇ ಅಲ್ಲೆ ಇನ್ನೊಂದು ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಇದಕ್ಕೆ ತಕ್ಕ ಉದಾಹರಣೆ ಎಂದರೆ, ವಾರ್ಡ್ ನಂಬರ 64 ರ ಸಿಬಿಟಿ ಹತ್ತಿರ ಇರುವ ಕನ್ನಡ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿ.

ಸ್ಮಾರ್ಟ್ ಸಿಟಿ ಅಡಿಯಲ್ಲಿ ಇಲ್ಲಿ ಕಾಮಗಾರಿ ಮಾಡಿದ್ದಾರೆ. ಆದರೆ ಅದರ ಜೊತೆ ಕುಡಿ ನೀರಿನ ಪೈಪ್ ಒಡೆದು ಒಂದು ಅವಾಂತರ ಕೂಡ ಮಾಡಿದ್ದಾರೆ. ಪೈಪ್ ಒಡೆದಿರುವುದರಿಂದ ಇಂದು ಕುಡಿಯುವ ನೀರು ಬಿಟ್ಟಿದ್ದಾರೆ, ನೀರು ಪೋಲಾಗಿ ರಸ್ತೆ ಮತ್ತು ಕಾಂಪ್ಲೆಕ್ಸ್ ಒಳಗೆ ನುಗ್ಗಿದೆ. ಇದರಿಂದ ಮಳಿಗೆಗಳಲ್ಲಿ ವ್ಯಾಪಾರ ಕೂಡ ಮಾಡುವುದಕ್ಕೆ ಆಗುತ್ತಿಲ್ಲವೆಂದು ಅಲ್ಲಿನ ಜನ ಗೋಳಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪಾಲಿಕೆ ಸದಸ್ಯೆ ಪೂಜಾ ಸತೀಶ ಶೇಜವಾಡಕರ್ ಅವರಿಗೆ ತಿಳಿಸಿದರು ಕೂಡ, ಕ್ಯಾರೆ ಎನ್ನುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕೇವಲ ಚುನಾವಣೆಯ ಸಂದರ್ಭದಲ್ಲಿ ಪ್ರಜೆಗಳ ಕೈ ಕಾಲು ಹಿಡಿದು ನಿಮ್ಮ ಸಮಸ್ಯೆಯೇ ನಮ್ಮ ಸಮಸ್ಯೆ ಎಂದು ಕಥೆ ಹೇಳುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ನೀವು ಯಾರೊ ನಾವು ಯಾರೊ ಅನ್ನುವಂತಹ ಪರಿಸ್ಥಿತಿ ಈಗ ಎದುರಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿಸದಿದ್ದರೆ ನಾಳೆ ದಿನದಂದು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

14/10/2021 10:25 pm

Cinque Terre

72.25 K

Cinque Terre

5

ಸಂಬಂಧಿತ ಸುದ್ದಿ