ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕಗ್ಗತ್ತಲಲ್ಲಿದ್ದ ಚನ್ನಮ್ಮ ಪುತ್ಥಳಿಗೆ, ಈಗ ಪಬ್ಲಿಕ್ ನೆಕ್ಸ್ಟ್ ನಿಂದ ಒಲಿದು ಬಂತು ಬೆಳಕು. ಎಸ್,,,, ಸುಮಾರು ದಿನಗಳಿಂದ ಬೆಳಕಿಲ್ಲದೆ ಚನ್ನಮ್ಮ ಪುತ್ಥಳಿ ಬಿಕೋ ಎನ್ನುತ್ತಿತ್ತು, ಇದನ್ನು ಗಮನಿಸಿದ ನಿಮ್ಮ ಪಬ್ಲಿಕ್ ನೆಕ್ಸ್ಟ್, ಕಳೆದ ಎರಡು ದಿನಗಳ ಹಿಂದೆ ವರದಿಯನ್ನು ಬಿತ್ತರಿಸಿತ್ತು, ವರದಿಗೆ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು, ಲೈಟ್ ವ್ಯವಸ್ಥೆ ಮಾಡಿ ನೋಡುಗರಿಗೆ ಝಗಮಗಿಸುವಂತೆ ಮಾಡಿದೆ.
ಹುಬ್ಬಳ್ಳಿ ಅಂದ್ರೆ ಸಾಕು ಎಲ್ಲರಿಗೂ ನೆನಪಾಗುವುದು ಕಿತ್ತೂರ ರಾಣಿ ಚನ್ನಮ್ಮ, ಅದೇ ಚನ್ನಮ್ಮ ಕತ್ತಲಲ್ಲೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಗ್ಗತ್ತ ಕೆಳಗೆ ಚನ್ನಮ್ಮ ಪುತ್ಥಳಿ! ಕಣ್ಮಿಚ್ಚಿ ಕುಳಿತ ಪಾಲಿಕೆ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಿತ್ತು, ವರದಿಯನ್ನು ನೋಡಿದ ಪಾಲಿಕೆ ಅಧಿಕಾರಿಗಳು ಲೈಟ್ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
13/10/2021 10:37 am