ಅಳ್ನಾವರ: ತಾಲೂಕಿನಾದ್ಯಂತ ಮಳೆಯು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಳ್ನಾವರ ದ ರೇಲ್ವೆ ಸೇತುವೆ ಕೆಳಗಡೆ ರಸ್ತೆಯು ಮಳೆಯ ನೀರಿನಿಂದ ತುಂಬಿ ದಾಟಲು ರಸ್ತೆ ಇಲ್ಲದಂತೆ ಸಾರ್ವಜನಿಕರಿಗೆ ಕೆಲಕಾಲ ತೊಂದರೆ ಉಂಟು ಮಾಡಿತು.
ಮಳೆ ಬಂತೆಂದರೆ ಸಾಕು ಈ ಸೇತುವೆ ನೀರಿನಿಂದ ಸಂಪೂರ್ಣ ಬರ್ತಿಯಾಗಿ ಬಿಡುತ್ತದೆ.ಅಳ್ನಾವರ ದಿಂದ ಹಳಿಯಾಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೊಂದೇ.ನಿನ್ನೆ ಸುರಿದ ಮಳೆಗೆ ಸೇತುವೆ ಕೆಳಗಡೆ ರಸ್ತೆಯಲ್ಲ ನೀರಿಂದ ಭರ್ತಿ ಯಾಗಿ ವಾಹನಗಳು,ಜನರು ಓಡಾಡಲು ಕೆಲಕಾಲ ತೊಂದರೆ ಅನುಭವಿಸಬೇಕಾಯಿತು.
ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ.ಹೆಚ್ಚಾಗಿ ಮಳೆ ಸುರಿದರೆ ವಾಹನ ಓಡಾಡಲು ಸಾಧ್ಯವಿಲ್ಲ.ವಾಹಣವಿರಲಿ ಸಾರ್ವಜನಿಕರು ಸಹ ಓಡಾಡುವುದು ಅಸಾಧ್ಯವಾಗಿದೆ.
ಅಳ್ನಾವರ ತಾಲೂಕು ಪ್ರವಾಹ ಪೀಡಿತ ಪ್ರದೇಶವಾಗಿದ್ದು ಇದನ್ನ ವೀಕ್ಷಿಸಲು ಕೇಂದ್ರ ದಿಂದ ತಂಡ ಬಂದು ವೀಕ್ಷಣೆ ಮಾಡಿ ಹೋಯಿತು.ಆದರೆ ಪ್ರಯೋಜನ ಮಾತ್ರ ಶೂನ್ಯ.ಮಂತಿಗಳು,ಎಂ,ಎಲ್ ಎ ಗಳು ಎಲ್ಲರೂ ಬಂದು ವೀಕ್ಷಣೆ ಮಾಡಿ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭಾಷಣ ನೀಡಿದರೆ ಹೊರತು ಪರಿಹಾರ ಮಾತ್ರ ಸಾಧ್ಯವಾಗಿಲ್ಲ.
ಓಡಾಡಲು ರಸ್ತೆ ಇಲ್ಲದೆ, ಸೇತುವೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಸರ್ಕಾರ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ
-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ಅಳ್ನಾವರ .
Kshetra Samachara
12/10/2021 10:46 am