ಹುಬ್ಬಳ್ಳಿ: ದಸರಾ ಹಬ್ಬದ ಅಂಗವಾಗಿ, ಶ್ರೀ ಸಾಯಿ ರಾಮ ಫ್ರೆಂಡ್ಸ್ ವತಿಯಿಂದ, ನಗರದ ಆನಂದ ನಗರದ ಅಂಬಾಭವಾನಿ ವಜ್ರಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ, ಬಡ ಜನರಿಗೆ ದವಸ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಶ್ರೀ ಸಾಯಿ ರಾಮ ಫ್ರೆಂಡ್ಸ್ ಕಳೆದ 5 ವರ್ಷದಿಂದ ಜನರಿಗೆ ಈ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಕಾರ್ಯಕ್ಕೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಎಸ್ ಕೆ ಸಮಾಜದ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ. ಮಾಜಿ ಶಾಸಕ ಅಶೋಕ ಕಾಟವೆ, ಇಂದು ಸಂಜೆ ಸಂಪಾದಕ ಗುರುರಾಜ ಹೂಗಾರ, ಗೋಪಾಲ ಬದ್ದಿ, ಜೆ ವಿ ಇರಕಲ್, ವಿಜಯ ಕಲಬುರ್ಗಿ, ರೋಹಿತ ಹಬೀಬ, ದೀಪಕ ಖೋಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
11/10/2021 03:00 pm