ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಪಿಎಂಸಿ ಆವರಣದಿಂದ ಮಾರ್ಕೆಟ್ ' ಗೆ ಬಂತು ಪೋಸ್ಟ್ ಆಫೀಸ್ !

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಶ್ರೀಧರ ಪೂಜಾರ ಕುಂದಗೋಳ

ಕುಂದಗೋಳ : 1987ರ ಪಾಳು ಬಿದ್ದ ಕಟ್ಟಡ ಕೊಂಕಣ ಸುತ್ತಿ ಪೋಸ್ಟ್ ಆಫೀಸ್ ತಲುಪುವ ಕಚ್ಚಾ ರಸ್ತೆಗೆ ಹೊಂದಿಕೊಂಡು ಎಂಪಿಎಂಸಿ ಆವರಣದಲ್ಲಿ ಇಂದು ನಾಳೆಯೋ ಬಿಳುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕುಂದಗೋಳ ಪಟ್ಟಣದ ಪೋಸ್ಟ್ ಆಫೀಸ್ ಸಂಬಂಧಿಸಿದಂತೆ ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿಯಿಂದಾಗಿ ಹಳೇ ಪೋಸ್ಟ್ ಆಫೀಸ್'ಗೆ ಬೀಗ ಜಡಿದು ಹೊಸ ಪೋಸ್ಟ್ ಆಫೀಸ್'ಗೆ ಪಾದಾರ್ಪಣೆ ಮಾಡಿದೆ.

ಹೌದು ! ಕಳೆದ ಹಲವಾರು ವರ್ಷಗಳಿಂದ ವೃದ್ಧರು ಅಂಗವಿಕಲರಿಗೆ ದೂರವಾಗಿ ಕುಂದಗೋಳ ಪಟ್ಟಣದಿಂದ 2 ಕಿ.ಮೀ ದೂರದ ಎಪಿಎಂಸಿ ಆವರಣದ ಹಳೇ ಕಟ್ಟಡದಲ್ಲಿ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದ ಪೋಸ್ಟ್ ಆಫೀಸ್ ಹಾಗೂ ಸಿಬ್ಬಂದಿಗಳು ಮಾರ್ಕೆಟ್ ರೋಡ್'ನಲ್ಲಿರುವ ಹೊಸ ಕಟ್ಟಡದಲ್ಲಿ ತಮ್ಮ ಕರ್ತವ್ಯ ಆರಂಭಿಸಿದ್ದಾರೆ.

ಇನ್ನು ಇಷ್ಟೇಲ್ಲಾ ಸಾಧ್ಯವಾಗಿದ್ದು ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ "ಜನಸಾಮಾನ್ಯರಿಗೆ ದೂರವಾಯ್ತು ಪೋಸ್ಟ್ ಆಫೀಸ್" ಎಂಬ ವರದಿಯಿಂದ ಎಂದು ಹೇಳಲು ಹೆಮ್ಮೆಪಟ್ಟಿದ್ದಾರೆ ಜನಸಾಮಾನ್ಯರು.

ಸದ್ಯ ಸುಸಜ್ಜಿತವಾದ ಹೊಸ ಪೋಸ್ಟ್ ಆಫೀಸ್ ಕಟ್ಟಡವು ಗಾಳಿ ಬೆಳಕಿನ ಜೊತೆಗೆ ವಿಸ್ತಾರವಾದ ಜಾಗದಲ್ಲಿದ್ದು ಗ್ರಾಹಕರಿಗೆ ಅನುಕೂಲವಾದ ವಾತಾವರಣವನ್ನು ಕಲ್ಪಿಸಿ ಕೊಟ್ಟಿದೆ ಇನ್ನು ಜನಕ್ಕೆ ಈ ಆಫೀಸ್ ಗೆ ತಲುಪಲು ಮಾರ್ಗವು ಸನಿಹವಾಗಿದೆ.

Edited By : Nagesh Gaonkar
Kshetra Samachara

Kshetra Samachara

09/10/2021 05:50 pm

Cinque Terre

84.31 K

Cinque Terre

2

ಸಂಬಂಧಿತ ಸುದ್ದಿ