ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ಲೈಓವರ್ ನಿರ್ಮಾಣಕ್ಕೆ ಒಂದಿಲ್ಲೊಂದು ರೀತಿಯಲ್ಲಿ ವಿಘ್ನಗಳು ಎದುರಾಗುತ್ತಲೇ ಇದೆ. ಮಣ್ಣಿನ ಪರೀಕ್ಷೆ ಆಯ್ತು, ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಈಗ ಅಪಸ್ವರ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಟ್ರಾಪಿಕ್ ಕಿರಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದು, ಉಪಯೋಗವಿಲ್ಲದ ಪ್ಲೈಓವರ್ ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಬೇಡವೆ ಬೇಡ. ಬೇರೆ ಕಡೆಗೆ ನಿರ್ಮಾಣ ಮಾಡಿ. ಹುಬ್ಬಳ್ಳಿಯ ಕೇಂದ್ರ ಭಾಗದಲ್ಲಿ ಪ್ಲೈಓವರ್ ನಿರ್ಮಾಣ ಮಾಡಿದರೇ ಹುಬ್ಬಳ್ಳಿ ನಗರದ ಸೌಂದರ್ಯಕ್ಕೆ ಪೆಟ್ಟು ಬಿಳುವುದು ಮಾತ್ರವಲ್ಲದೆ ಮತ್ತಷ್ಟು ಅವ್ಯವಸ್ಥೆ ಆಗರವಾಗುವುದಂತೂ ಸತ್ಯ ಅಂತಿದ್ದಾರೆ. ಹುಬ್ಬಳ್ಳಿ ಉದ್ಯಮಿಗಳು.
ಹುಬ್ಬಳ್ಳಿ ನಗರದಲ್ಲಿ ಚೆನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ಪ್ಲೈ ಓವರ್ 3.6 ಕಿಲೊಮೀಟರ್ ಉದ್ದವಿದ್ದು, ಚನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್ ನಿರ್ಮಾಣವಾಗಲಿದೆ. ಮೂರು ಹಂತದ ಯೋಜನೆಗೆ 1,242 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಡಿಪಿಆರ್ ಮೂಲಕ ಇದು ಯಾರಿಗೂ ಕೂಡ ಉಪಯೋಗ ಆಗುವುದಿಲ್ಲ ಇದನ್ನು ಕೈ ಬಿಟ್ಟು ಬೇರೆ ಪರ್ಯಾಯ ಯೋಜನೆಯನ್ನು ಅವಳಿನಗರದ ಜನರಿಗೆ ತೆಗೆದುಕೊಂಡು ಬನ್ನಿ ಅಂತಿದ್ದಾರೆ ಮತ್ತೊಬ್ಬ ಉದ್ಯಮಿಗಳು.
ಒಟ್ಟಿನಲ್ಲಿ ಸಾಕಷ್ಟು ವಿರೋಧದ ನಡುವೆಯೂ ಇಂತಹ ಪ್ಲೈ ಓವರ್ ಬೇಕಾ ಎಂಬುವಂತ ಪ್ರಶ್ನೆ ಉದ್ಬವವಾಗಿದ್ದು, ಕೂಡ ಸಚಿವರು ಹಾಗೂ ಸಂಬಂಧ ಪಟ್ಟ ಅಧಿಕಾರಗಳು ಈ ಬಗ್ಗೆ ಸಾಕಷ್ಟು ಗಮನ ಹರಿಸಬೇಕಿದೆ.
Kshetra Samachara
09/10/2021 11:17 am