ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಬಿದ್ದ ಪರಿಣಾಮ ಈಗಾಗಲೇ ಸಾರಿಗೆ ಸಂಚಾರಕ್ಕೆ ಗುಡ್ ಬೈ ಹೇಳಲಾಗಿದ್ದು ಸ್ವತಃ ಸಾರಿಗೆ ಅಧಿಕಾರಿಗಳೇ ಈ ಬ್ರಿಡ್ಜ್ ಮೇಲೆ ಸಾರಿಗೆ ಸೇವೆ ನೀಡಲಾಗುವುದಿಲ್ಲ ಅಪಘಾತವಾದ್ರೇ ಯಾರು ಹೊಣೆ ಎಂಬ ಪ್ರಶ್ನೆ ಎತ್ತಿರುವುದು ಹಾಗೂ ಬಸ್ ಸೌಲಭ್ಯ ಕ್ಲೋಸ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದೀಗ ಇದೇ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಮೇಲೆ ರಾತ್ರೋರಾತ್ರಿ ಅಂತಾರಾಜ್ಯ ಸಾರಿಗೆ ಬಸ್ ಓಡಾಡಿದ್ದನ್ನ ಕಂಡು ಸಾರ್ವಜನಿಕರು ಪೋಟೋ ಸಮೇತ್ ಫೇಸ್ಬುಕ್ ಪೋಸ್ಟ್ ಹಾಕಿ ನ್ಯಾಯ ಕೇಳುತ್ತಿದ್ದಾರೆ ?
ಹೌದು ! ರೋಣ ಗದಗ ಶಿರಹಟ್ಟಿ ಮಾರ್ಗವಾಗಿ ಪಣಜಿ ಸೇರುವ ಸಾರಿಗೆ ಬಸ್ ಕಳೆದ ಎರಡ್ಮೂರು ದಿನಗಳ ಹಿಂದೆ ಈ ಬ್ರಿಡ್ಜ್ ಮೇಲೆ ಸಂಚರಿಸಿದೆ, ಇದಲ್ಲದೆ ರಾತ್ರಿ ಹೊತ್ತು ಬ್ರಿಡ್ಜ್ ಮೇಲೆ ಇತರೆ ವಾಹನ ಓಡಾಟ ಮಾಡುತ್ತವೆ ಎನ್ನುವ ಫೇಸ್ಬುಕ್ ಕಾಮೆಂಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿವೆ.
ಸಧ್ಯ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನೆಲಕ್ಕಪ್ಪಳಿಸಿದ ಪರಿಣಾಮ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವರ್ಗದವರು ಈ ಪಾದಯಾತ್ರೆ ಇಲ್ಲವೆ ಖಾಸಗಿ ವಾಹನಕ್ಕೆ ಕೈ ಮಾಡಿ ಊರು ಸೇರುವ ಅವ್ಯವಸ್ಥೆಯಲ್ಲಿ ಸಾರಿಗೆ ಬಸ್ ಬ್ರಿಡ್ಜ್ ಮೇಲೆ ಅದು ರಾತ್ರಿಹೊತ್ತು ಸಂಚರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Kshetra Samachara
08/10/2021 04:34 pm