ಹುಬ್ಬಳ್ಳಿ: ನಮ್ಮ ಹುಬ್ಳಿ ಅದ ಯವಾಗ ಸ್ಮಾರ್ಟ್ ಆಗುತ್ತ ಅಂತ ನಮ್ಮ ಮಂದಿ ಬಕಪಕ್ಷಿ ತರಾ ಕಾಯ್ತಾ ಕುಂತಾರ ನೋಡ್ರಿ.....
ಒಂದ ಸಣ್ಣ ಮಳಿ ಬಂತ್ ಅಂದ್ರ ಸಾಕ,,,ಮನಿ ಒಳಿಗ ನೀರು ನುಗ್ತಾವ,,, ರೋಡ ಎಲ್ಲಾ ತಗ್ಗು ಗುಂಡಿ ಬಿದ್ದಾವ,,, ರೋಡ್ ಎಲ್ಲಾ ಕೆಸರುಮಯದಿಂದ ಕಂಗೋಳಿಸ್ತಾವ ನೋಡ್ರಿ....
ಈ ಪಾಲಿಕೆ ಮಾತ್ರ ಸರಿಯಾಗಿ ನಮ್ಮ ಮಂದಿ ಕಡೆ ಅದು ಇದು ಅಂತ ಶುಲ್ಕ ತುಂಬಸ್ಕೊತ್ತಾರ..... ಪಾಪ ನೋಡ್ರಿ ಅವರು ಹೆದರಿ ತುಂಬತ್ತಾರ... ಆದ್ರ ಸೌಲಭ್ಯ ಮಾತ್ರ ಕೇಳಬೇಡಿ ಅಂತಾರ ಈ ಅಧಿಕಾರಿಗಳು.....
ಕೊರೊನಾ ಏನೋ ಕಡಮಿ ಆಗೆತಿ ಅಂತ ಮಾಸ್ಕ್ ಬಿಟ್ಟು ಓಡಾಡುಕು ಆಗ್ತಿಲ್ಲ ನಮ್ಮ ಜನಕ್ಕ,,,, ಯಾಕ ಹೇಳ್ರಿ? ಅದ ರೀ ಧೂಳ.... ರೋಡ್ ಮಾಡಿದ್ರ ಅಂದ್ರ ಸ್ವಲ್ಪ ದಿನದಲ್ಲಿ ರೋಡ್ ಗುಂಡಿ ಬಿಳ್ತಾವ ನೋಡ್ರಿ... ಅದೆಷ್ಟೋ ಜನ ಗುಂಡಿ ಒಳಗ ಬಿದ್ದು ಕೈ ಕಾಲು ಮುರ್ಕೊಂಡಾರ ಪಾಪ,,,,,, ಏನ ಮಾಡುದ ನಮ್ಮ ಅಧಿಕಾರಿಗಳು ಜನನಾಯಕರು ಇಂತವರ ಇದ್ದಾರ ನಮ್ಮ ಹುಬ್ಳಿದಲ್ಲೆ.....
ಅಷ್ಟಕ್ಕೂ ನಮ್ಮ ಪಾಲಿಕೆ ಆಯುಕ್ತರು ಗುಂಡಿ ಮುಚ್ಚುವುದ ಬಗ್ಗೆ ಏನು ಹೇಳಿದ್ದಾರೆ ಕೇಳಿ ನೀವೆ.....
ಒಟ್ನಲ್ಲಿ ನಮ್ಮ ಹುಬ್ಳಿ ಧಾರವಾಡ ಯವಾಗ ಸ್ಮಾರ್ಟ ಆಗಬೇಕು,,,, ನಮ್ಮ ಜನ ಯವಾಗ ನೀರಾಳವಾಗಿ ಜೀವನ ಸಾಗಸಬೇಕು ಎಂಬುದನ್ನು ಕಾದು ನೋಡಬೇಕಿದೆ.....
ಈರಣ್ಣ ವಾಲಿಕಾರ,
ಪಬ್ಲಿಕ್ ನೆಕ್ಸ್ಟ್
Kshetra Samachara
06/10/2021 02:05 pm