ಹುಬ್ಬಳ್ಳಿ : ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಿಸಿದರೆ ವಾಣಿಜ್ಯ ಚಟುವಟಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳಿ ಕೆಲವರು ಫ್ಲೈಓವರ್ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದರೆ, ಇದೇ ವಾಣಿಜ್ಯೋದ್ಯಮಿಗಳನ್ನು ಪ್ರತಿನಿಧಿಸುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಫ್ಲೈಓವರ್ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ
ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಚೇಂಬರ್ ಪದಾಧಿಕಾರಿಗಳು ಹಾಗೂ ಸದಸ್ಯರು ಒಕ್ಕೊರಲಿನಿಂದ ಫ್ಲೈಓವರ್ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಫ್ಲೈಓವರ್ ನಿರ್ಮಾಣ ಮಾಡಬೇಕೆಂದು ಚೇಂಬರ್ ಬೇಡಿಕೆ ಸಲ್ಲಿಸುತ್ತ ಬಂದಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯ ಮುಂದೂಡುತ್ತ ಬಂದಿತ್ತು. ಈಗ ಫ್ಲೈಓವರ್ ನಿರ್ಮಾಣ ಕಾರ್ಯದ ಕಾಲ ಕೂಡಿ ಬಂದಿದ್ದು, ಶೀಘ್ರವಾಗಿ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕೆಂದು ಸಂಸ್ಥೆಯು ಕೋರಿದೆ.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯನ್ನಿಟ್ಟುಕೊಂಡು ಈ ಯೋಜನೆಯಡಿ ಇದ್ದಂತಹ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು (ಉದಾ:ರಸ್ತೆ ಅಗಲೀಕರಣ, ಸರ್ಕಲ್ ನಿರ್ಮಾಣ, ಪಾದಚಾರಿ ರಸ್ತೆ ಸೇರಿದಂತೆ) ಈ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಈ ಫ್ಲೈಓವರ್ ಯೋಜನೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಆಗಬೇಕೆಂಬ ಅಭಿಲಾಷೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯದಾಗಿದೆ.
ಸಾರ್ವಜನಿಕರ ಹಿತದೃಷ್ಟಿಯ ಫ್ಲೈಓವರ್ ಯೋಜನೆ ಆಗಬೇಕೆಂಬ ಏಕೈಕ ವಿಚಾರ ಸಂಸ್ಥೆಯದಾಗಿದೆ. ಈ ದಿಸೆಯಲ್ಲಿ ಈ ಯೋಜನೆ ಪೂರ್ಣಗೊಳ್ಳುವದೆಂಬ ವಿಶ್ವಾಸ ಸಂಸ್ಥೆಯದಾಗಿದೆ. ಒಟ್ಟಾರೆ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಬಯಸುವ ನಾವು ಇಂತಹ ಬೃಹತ್ ಯೋಜನೆಗಳನ್ನು ಸ್ವಾಗತಿಸಿ, ಶೀಘ್ರವಾಗಿ ಫ್ಲೈಓವರ್ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕೆ0ದು ಕೋರಿದೆ.
ಸಂಸ್ಥೆಯು ಇಂದು ಸಭೆ ಸೇರಿ ಎಲ್ಲ ಸಂಘ-ಸಂಸ್ಥೆಗಳ ಅಭಿಪ್ರಾಯದೊಂದಿಗೆ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ದೃಷ್ಟಿಯಿಂದ ಫ್ಲೈಓವರ್ ನಿರ್ಮಾಣ ಕಾರ್ಯ ಆಗಬೇಕೆಂದು ಒಕ್ಕೋರಲಿನಿಂದ ತೀರ್ಮಾನಿಸಿದೆ.
ಈ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹೇಂದ್ರ ಎಚ್. ಲದ್ದಡ, ಮಾಜಿ ಅಧ್ಯಕ್ಷರುಗಳಾದ ಶಂಕರಣ್ಣ ಮುನವಳ್ಳಿ, ವಸಂತ ಲದವಾ, ರಮೇಶ ಪಾಟೀಲ, ಉಪಾಧ್ಯಕ್ಷರಾದ ಸಿದ್ದೇಶ್ವರ ಕಮ್ಮಾರ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
Kshetra Samachara
05/10/2021 05:41 pm