ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ಒಣ ಕಸ ಸಂಗ್ರಹಣೆ ಡಬ್ಬವನ್ನು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ತ್ಯಾಜ್ಯ ವಸ್ತುಗಳನ್ನು ಈ ಬುಟ್ಟಿಯಲ್ಲಿ ಹಾಕಿ ಮುಂದೆ ಗ್ರಾಮ ಪಂಚಾಯಿತಿಯಿಂದ ವಿಲೇವಾರಿ ಘಟಕ ಸ್ಥಾಪನೆಯಾಗುತ್ತಿದೆ ಸ್ಥಾಪನೆಯಾದ ನಂತರ ಗಾಡಿ ಮುಖಾಂತರ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆ ಉಪಯುಕ್ತವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಕುರಣಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸೊರಟೂರ, ಸದಸ್ಯರಾದ ನೀಲವ್ವ ಹೊಸಳ್ಳಿ, ತಾಯವ್ವ ಕೆಂಚಣ್ಣನವರ, ವಿಶಾಲ್ ಯೋಗಪ್ಪನವರ, ಶಂಕ್ರವ್ವ ಹೊಸಳ್ಳಿ, ಸಕ್ರಪ್ಪ ಕಮ್ಮಾರ, ಚಿದಾನಂದ ಕುಸುಗಲ್, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಯೋಗಪ್ಪನವರ, ಯಲ್ಲವ್ವ ಹುಲಿಕಟ್ಟಿ, ನಾಗರತ್ನ ದಾನನ್ನವರ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
04/10/2021 07:49 pm