ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಅಸಮರ್ಪಕ ಬಸ್, ಇರುವ ಬಸ್ ಗೆ ಜೋತುಬಿದ್ದ ವಿದ್ಯಾರ್ಥಿಗಳು

ಅಣ್ಣಿಗೇರಿ: ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಪ್ರದೇಶಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಜೀವಭಯದಿಂದ ಹೋಗುವ ದೃಶ್ಯ ಪಟ್ಟಣದಲ್ಲಿ ಎದ್ದು ಕಾಣುತ್ತಿದೆ.

ಹೌದು..ತಾಲೂಕಿನ ವಿವಿಧ ಗ್ರಾಮಗಳಿಂದ ಮತ್ತು ಪಟ್ಟಣದಿಂದ ಗದಗ-ಹುಬ್ಬಳ್ಳಿ ನಗರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ಅಸಮರ್ಪಕ ಬಸ್ ಇದ್ದರಿಂದ ಇರುವ ಬಸ್ ಗಳ ಮೂಲಕ ಜೋತು ಬಿದ್ದು ಹೋಗುವ ಅನಿವಾರ್ಯತೆ ಉಂಟಾಗಿದೆ. ಮುಂಜಾನೆ ಹಾಗೂ ಸಾಯಂಕಾಲದ ವೇಳೆಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೋಗಿ ಬರಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಬಸ್ ನಲ್ಲಿ ಜೋತು ಬಿದ್ದು ಹೋಗುವಾಗ ಏನಾದರೂ ಅವಘಡಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ? ಸ್ಥಳೀಯರ ಆರೋಪವಾಗಿದೆ.ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಿ ಅನುಕೂಲ ಮಾಡಬೇಕೆಂದು ಸ್ಥಳೀಯ ಪಾಲಕರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/09/2021 11:30 am

Cinque Terre

34.5 K

Cinque Terre

3

ಸಂಬಂಧಿತ ಸುದ್ದಿ