ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್; ವರದಿಗೆ ಸ್ಪಂದಿಸಿದ ಅಧಿಕಾರಿಗಳಿಂದ ಶುಚಿಗೊಂಡ ಬಸ್ ನಿಲ್ದಾಣದ ಆವರಣ

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

ನವಲಗುಂದ : ಮೂತ್ರಾನೂ ಅಲ್ಲೇ, ಕಸಾನೂ ಅಲ್ಲೇ ಹದಗೆಟ್ಟ ಬಸ್ ನಿಲ್ದಾಣದ ಆವರಣ, ಎಂಬ ಶೀರ್ಷಿಕೆ ಅಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ ಎರಡು ದಿನಗಳ ಹಿಂದೆ ಸುದ್ದಿಯೊಂದನ್ನು ಬಿತ್ತರಿಸಿತ್ತು. ಇದಕ್ಕೆ ಸ್ಪಂದಿಸಿದ ನವಲಗುಂದ ಡಿಪೋ ವ್ಯವಸ್ಥಾಪಕರು ಬಸ್ ನಿಲ್ದಾಣದ ಸ್ವಚ್ಛತೆಗೆ ಶನಿವಾರ ಮುಂದಾಗಿ ಸಂಪೂರ್ಣ ಬಸ್ ನಿಲ್ದಾಣವನ್ನು ಶುಚಿಗೊಳಿಸಿದರು.

ಹೌದು ನವಲಗುಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಗಾಗಿ ಗಂಟೆಗಟ್ಟಲೆ ಇದೇ ಕಸದ ಪಕ್ಕ ಕುಳಿತು ಕಾಯಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೇ ಬಸ್ ನಿಲ್ದಾಣದಲ್ಲಿ ಶುಕ್ರವಾರ ಶೌಚಾಲಯ ಕೂಡ ಬಾಗಿಲು ಹಾಕಿತ್ತು. ಇದರಿಂದ ಸಾರ್ವಜನಿಕರು ಬಸ್ ಆವರಣದಲ್ಲೇ ಮೂತ್ರಕ್ಕೆ ಮುಂದಾಗಿದ್ದರು. ಈಗ ಇದರತ್ತ ಸಹ ಗಮನಹರಿಸಿ, ಶೌಚಾಲಯದ ಸುವ್ಯವಸ್ಥೆ ಮತ್ತು ಪುರಸಭೆ ವತಿಯಿಂದ ಆವರಣದ ಸ್ವಚ್ಛತೆಗೆ ಮುಂದಾದ ಹಿನ್ನೆಲೆ ಪ್ರಯಾಣಿಕರು ಸಹ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ನಿಲ್ದಾಣದಲ್ಲಿ ಶೌಚಾಲಯವಿದ್ದರೂ ಆವರಣದಲ್ಲಿ ಮೂತ್ರ ಮಾಡುವ ಪ್ರಯಾಣಿಕರು ಸಹ ಎಚ್ಚೆತ್ತು ಶೌಚಾಲಯವನ್ನು ಉಪಯೋಗಿಸುವ ಮೂಲಕ ಸ್ವಚ್ಛತೆ ಕಾಪಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

25/09/2021 04:00 pm

Cinque Terre

25.75 K

Cinque Terre

1

ಸಂಬಂಧಿತ ಸುದ್ದಿ