ಹುಬ್ಬಳ್ಳಿ:ಹಣಕಾಸಿನ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದ ಕಲಘಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಕಡ್ಡಾಯ ನಿವೃತ್ತಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕಲಘಟಗಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರ ಬಗ್ಗೆ ಉಪಲೋಕಾಯುಕ್ತರು ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ತೀರ್ಮಾನವನ್ನ ತೆಗೆದುಕೊಂಡಿದೆ.
ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಹಲವು ಬಾರಿ ಭ್ರಷ್ಟಾಚಾರದಲ್ಲಿ ಕಂಡು ಬಂದಿದ್ದರೂ, ಕೆಲವು ಪ್ರಮುಖರ ಆಶೀರ್ವಾದದಿಂದ ಮತ್ತೆ ಮತ್ತೆ ಉತ್ತಮ ಜಾಗಕ್ಕೆ ಬಂದು ಕೂಡುತ್ತಿದ್ದರು. ,ಆದ್ರೆ ರಾಜ್ಯ ಸರ್ಕಾರ ಕೊನೆಗೂ ಎಂ.ಎಸ್.ಮೇಟಿಯವರ ಕಾರ್ಯಕ್ಕೆ ಮುಕ್ತಿ ಕೊಡಲು ಮುಂದಾಗಿದೆ. ಆದ್ರೆ ಇವರ ಪರವಾಗಿ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ್ ಸಾಕಷ್ಟು ಲಾಭಿ ನಡೆಸಿದ್ದರು. ಆದರೆ ಅವರಿಗೆ ಇದರಿಂದ ತೀವ್ರ ಹಿನ್ನಡೆಯಾದಂತಾಗಿದೆ.
Kshetra Samachara
23/09/2021 12:33 pm