ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.23ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಹುಬ್ಬಳ್ಳಿ : ನಗರದ ಆಯುರ್ವೇದ ಸೇವಾ ಸಮಿತಿ ಹಾಗೂ ಆಯುರ್ವೇದ ಮಾಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸೆ. 23 ರಂದು ವೈದ್ಯ ಗುರು ದಾಮೋದರ ಹಲಸಿಕರ ಅವರ ಬಗ್ಗೆ ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೋವಿಂದ ಜೋಶಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಾಜಿ ಜಿ.‌ ಚವ್ಹಾಣ ಅವರು ದಾಮೋದರ ಹರಸಿಕರಯವರ ಬಗ್ಗೆ ಸಂಶೋಧಿಸಿ ಪುಸ್ತಕವನ್ನು ಬರೆದಿದ್ದಾರೆ. ಪ್ರಸ್ತುತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪುಸ್ತಕವು ಬಿಡುಗಡೆಗೊಳಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಗರಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋವಿಂದ ಮಣ್ಣೂರ, ಶಿವಾಜಿ ಚವ್ಹಾಣ, ಪ್ರಶಾಂತ ಕೆ.ಎಚ್, ಸಿ.ತ್ಯಾಗರಾಜ ಸೇರಿದಂತೆ ಮುಂತಾದವರು ಇದ್ದರು.

Edited By : PublicNext Desk
Kshetra Samachara

Kshetra Samachara

22/09/2021 02:43 pm

Cinque Terre

22.73 K

Cinque Terre

0

ಸಂಬಂಧಿತ ಸುದ್ದಿ