ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜಲ ಜೀವನ್ ಮಿಷನ್ ಆಸಕ್ತಿ, ಶುದ್ಧ ನೀರಿನ ಘಟಕದ ನಿರ್ವಹಣೆಗಿಲ್ಲಾ !

ಕುಂದಗೋಳ : ಕುಂದಗೋಳ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ.

ಆದ್ರೇ,! ಈ ಯೋಜನೆ ಅನುಷ್ಠಾನದಲ್ಲಿ ತಾಲೂಕು ಗ್ರಾಮ ಪಂಚಾಯಿತಿ ಸೇರಿ ಸಹಾಯಕ ನಿರ್ವಾಹಕ ಅಭಿಯಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಈ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮೂಲೆಗೆ ತಳ್ಳಿ ಅವುಗಳ ನಿರ್ವಹಣೆಯನ್ನೇ ಮರೆತಿದ್ದು ಕೆಲ ಶುದ್ಧ ನೀರಿನ ಘಟಕ ಕೆಟ್ಟು ನಿಂತು ತುಕ್ಕು ಹಿಡಿಯುತ್ತಿವೆ.

ಕುಂದಗೋಳ ತಾಲೂಕಿನಲ್ಲಿ ಬರೋಬ್ಬರಿ 85 ಶುದ್ಧ ನೀರಿನ ಘಟಕಗಳಿದ್ದು ಆ ಪೈಕಿ 21 ಕ್ಕಿಂತ್ ಅಧಿಕ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ.

ಈ ಪರಿಣಾಮ ಹಳ್ಳಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಭೇದಿ ಹೆಚ್ಚಾಗಿದ್ದು ರೈತಾಪಿ ಜನ ಅನಿವಾರ್ಯವಾಗಿ ರಾಡಿ ಕೆರೆ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಜಲ ಜೀವನ್ ಮಿಷನ್ ಯೋಜನೆಗೂ ಮುನ್ನ ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಿ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

19/09/2021 08:41 pm

Cinque Terre

102.24 K

Cinque Terre

1

ಸಂಬಂಧಿತ ಸುದ್ದಿ