ಪಬ್ಲಿಕ್ ನೆಕ್ಸ್ಟ್ - ಈರಣ್ಣ ವಾಲಿಕಾರ
ಹುಬ್ಬಳ್ಳಿ- ಹುಬ್ಬಳ್ಳಿ ಮತ್ತೊಂದು ಬೆಂಗಳೂರು ಆಗುತ್ತಿದ್ದು, ಈಗ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಜಾಮ್ ಸರ್ವೆ ಸಾಮಾನ್ಯವಾಗಿದೆ. ಒಂದೇ ಸಲ ಎಲ್ಲಾ ಕಾಮಗಾರಿ ಮುಗಿಸಬೇಕೆಂಬ ಹಠಕ್ಕೆ ಬಿದ್ದ ಜಿಲ್ಲಾಡಳಿತ, ನಗರದ ಪ್ರಮುಖ ರಸ್ತೆಗಳನ್ನು ಅಗೆದು ಹಾಕಿ ಕಾಮಗಾರಿ ಆರಂಭಿಸಿದೆ. ಆದರೆ ಜನರ ಸಂಕಷ್ಟಕ್ಕೆ ಯಾರು ಹೊಣೆ ಯಾಗುತ್ತಾರೆ ಹೇಳಿ?...
ಕೊರೊನಾ ಲಾಕ್ ಡೌನ್ ಪೂರ್ವದಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಪಾಲಿಕೆ, ಬಹುತೇಕ ಎಲ್ಲಾ ರಸ್ತೆಗಳನ್ನು ಅಗೆದು ಹಾಕಿ ಕಾಮಗಾರಿ ಪ್ರಾರಂಭಿಸಿತ್ತು, ಆದರೆ ಲಾಕ್ ಡೌನ್ ಜಾರಿ ಆದ ನಂತರ ಕಾರ್ಮಿಕರ ಅಲಭ್ಯತೆ ಸ್ಮಾರ್ಟ ಸಿಟಿಯ ಎಲ್ಲಾ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುವಂತೆ ಮಾಡಿತು. ಇದರಿಂದಾಗಿ ಹುಬ್ಬಳ್ಳಿ ಜನರು ಬೇಸತ್ತು ಹೋಗಿದ್ದರು. ಇನ್ನು ಪ್ಲೈ ಓವರ್ ಕಾಮಗಾರಿಗೆ ಇನ್ನೂ ಎಷ್ಟು ಹರಸಾಹಸ ಪಡಬೇಕೆಂದು ಸಾರ್ವಜನಿಕರಿಗೆ ಚಿಂತೆ ಹತ್ತಿದೆ.
ಆದರೆ, ಲಾಕ್ಡೌನ್ ಸಡಿಲಿಕೆ ಬಳಿಕ ನಗರ ಟ್ರಾಫಿಕ್ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದೆ. ಇದಕ್ಕೆ ಕಾರಣ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಪ್ಲೈಓವರ್ ಕಾಮಗಾರಿಗಳು.
ಸದ್ಯ ನಗರದ ಗೋಕುಲ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇವು ಏರ್ಪೋರ್ಟ್ ಮೂಲಕ ನಗರವನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈಗಾಗಲೇ ವಾಹನ ಸಂಚಾರದಿಂದ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
Kshetra Samachara
18/09/2021 08:21 pm