ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯಲಿವಾಳ ಗ್ರಾಮಕ್ಕೆ ಜಿಪಂ ಸಿಇಓ ಬೇಟಿ ವಿವಿಧ ಕಾಮಗಾರಿ ಪರಿಶೀಲನೆ

ಕುಂದಗೋಳ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿಯವರು ಇಂದು ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡು ಕಾಮಗಾರಿಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಕಾಮಗಾರಿ ವೀಕ್ಷಣೆ ಬಳಿಕ ಸ್ಥಳೀಯ ಅಂಗನವಾಡಿ ಕಟ್ಟಡಕ್ಕೆ ಭೇಟಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಂದ ಈ ಅಂಗನವಾಡಿಯಲ್ಲಿ ಎಷ್ಟು ಮಕ್ಕಳು ದಾಖಲಾತಿ ಇದೆ. ಎಲ್ಲ ಮಕ್ಕಳಿಗೂ ಸರಿಯಾಗಿ ಪೌಷ್ಟಿಕ ಆಹಾರದ ಸಾಮಗ್ರಿ ವಿತರಣೆ ಆಗುತ್ತಿದೆಯಾ ಎಂದು ಮಾಹಿತಿ ಪಡೆದು ಜಿಪಂ ವತಿಯಿಂದ ನೀಡಲಾಗುವ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕುಂದಗೋಳ ತಾಲೂಕು ಪಂಚಾಯಿತಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರಕ ಹಾಗೂ ಪಿಡಿಓ ಬಸವರಾಜ ಬಾಗಲ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

18/09/2021 06:40 pm

Cinque Terre

33.46 K

Cinque Terre

1

ಸಂಬಂಧಿತ ಸುದ್ದಿ