ಲಕ್ಷ್ಮೇಶ್ವರ: ನಮ್ಮ ರಸ್ತೆಗಳು ಹೇಗೆ ಇದ್ದಾವೇ ಅಂದರೆ ಮಳೆ ಬಂದಾಗ ಗುಂಡಿಯಲ್ಲಿ ನೀರು ನಿಂತು ಸಮತಟ್ಟಾದ ರೀತಿಯಲ್ಲಿ ಕಾಣುತ್ತವೆ. ಆದರೆ ಮಳೆ ಕಡಿಮೆ ಆಯ್ತು ಅಂದರೆ ರಸ್ತೆಯ ನಿಜ ಸ್ವರೂಪ ಬದಲಾಗುತ್ತದೆ.
ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಿಂದ ಶಿಗ್ಲಿವರೆಗಿನ ರಸ್ತೆಯೂ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಟಿವೆ. ಈ ರಸ್ತೆಯಲ್ಲಿ ಗೋನಾಳ ಗ್ರಾಮದಿಂದ ಶಿಗ್ಲಿ ಗ್ರಾಮಕ್ಕೆ ರೈತರು ಜಾನುವಾರುಗಳನ್ನು ಚಿಕಿತ್ಸೆ ಕೊಡಿಸಲು ಹೋಗುತ್ತಾರೆ ಇನ್ನೂ ಈ ರಸ್ತೆಯೂ ರೈತ ಸಂಪರ್ಕ ರಸ್ತೆಯಾಗಿದ್ದರಿಂದ ರೈತರಿಗೆ ಚಕ್ಕಡಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಅಷ್ಟೊಂದು ಹದಗೆಟ್ಟ ಹೋಗಿದೆ. ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನಾದರು ಮುಚ್ಚಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಿಗ್ಲಿ ಗ್ರಾಮದಲ್ಲಿ ಪಶು ಆಸ್ಪತ್ರೆ ಇರುವುದರಿಂದ ಇಲ್ಲಿ ರೈತರು ಜನರು ಶಿಗ್ಲಿ ಗ್ರಾಮಕ್ಕೆ ಹೋಗುತ್ತಾರೆ ಈ ರಸ್ತೆ ನೋಡಿದರೆ ರಸ್ತೆಯ ಮೇಲೆ ಡಾಂಬರೀಕರಣ ಇಲ್ಲದಂತೆ ಎಲ್ಲಾ ಡಾಂಬರ ಕಿತ್ತುಕೊಂಡು ಹೋಗಿದ್ದು, ರಸ್ತೆ ಸಂಪೂರ್ಣ ಗುಂಡಿಗಳಾಗಿಯೇ ಮಾರ್ಪಟಿದೆ. ಈ ರಸ್ತೆಯ ಮೇಲೆ ಕೆಲವೊಂದು ಅಪಘಾತ ಆಗಿರುವ ಘಟನೆಗಳು ನಡೆದು ಹೋಗಿವೆ. ಈ ರಸ್ತೆಯ ಮೇಲೆ ವಾಹನ ಸವಾರರು ಸ್ವಲ್ಪ ಆಯಾ ತಪ್ಪಿದರ ಸಾಕು ಬಿಳೋದು ಗ್ಯಾರಂಟಿ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯ ಮೇಲೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
Kshetra Samachara
13/09/2021 04:16 pm