ಕಲಘಟಗಿ: ಬಮ್ಮಿಗಟ್ಟಿ ವಲಯದ ತಂಬೂರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಪೋಷಣಾ ಮಾಹೆ-2021ರ ಕಾರ್ಯಕ್ರಮವನ್ನು ಅಂಗನವಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹದಿಹರಿಯದ ಹೆಣ್ಣುಮಕ್ಕಳಿಗೆ ಹಾಗೂ ಕಿಶೋರಿಯರಿಗೆ ರಕ್ತಹೀನತೆಯ ತಪಾಸಣೆಗೆ ಒಳಪಡಿಸಲಾಯಿತು.ಮೇಲ್ವಿಚಾರಕರಾದ ಶಂಕ್ರಮ್ಮ ಭೋವಿ ಕಿಶೋರಿಯರಿಗೆ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಐಎಫೆಎ ಮಾತ್ರೆಯ,ಕೋವಿಡ್ ಲಸಿಕೆಯ,ಆರೋಗ್ಯ ಹಾಗೂ ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡಿದರು.ನಂತರ ನಿಗದಿಪಡಿಸಿದ ಗುರಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷೆ ಲಕ್ಷ್ಮಿ ಬಾವಕಾರ,ಸದಸ್ಯರಾದ ಮಂಜುಳ ಲಮಾಣಿ, ಬಸವರಾಜ ಜಿನ್ನೂರ, ಬಮ್ಮಿಗಟ್ಟಿ ವಲಯದ ಮೇಲ್ವಿಚಾರಕರಾದ ಶಂಕ್ರಮ್ಮ ಭೋವಿ, ರೇಣುಕ ಉಳ್ಳಾಗಡ್ಡಿ, ಕಿರಿಯ ಆರೋಗ್ಯ ಸಹಾಯಕಿ ಈರಮ್ಮ ವಿಭೂತಿ,ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಉಳ್ಳಾಗಡ್ಡಿ,ಕಲಾವತಿ ತಾವರಗೇರಿ,ಆಶಾ ಕಾರ್ಯಕರ್ತೆ ಲೂಸ್ ಅಮ್ಮ ಭಂಡಾರಿ,ಸಂಗೀತ ಚೌಗುಡ್ಡ,ಯಲ್ಲವ್ವ ಭೋಸಲೆ ಉಪಸ್ಥಿತರಿದ್ದರು.
Kshetra Samachara
08/09/2021 06:54 pm