ಹುಬ್ಬಳ್ಳಿ : ಹುಬ್ಬಳ್ಯಾಗಿನ ರೋಡ್ ನೋಡಿದ್ರ ನಿದ್ದೆ ಬರುದಿಲ್ಲ ನೋಡ್ರಿ ಹಂಗಾಗ್ಯಾವ್ ರಸ್ತೆ.. ಇನ್ನ ಈ ರಸ್ತೆದಾಗ ಅಲ್ಲಲ್ಲೇ ಒಳಚರಂಡಿ ಒಡದ ಹೋಗ್ಯಾವ್ .. ಇನ್ ಮಂದಿ ಇಂತಹ ರೋಡನ್ಯಾಗ್ ಜೀವ ಕೈಯಾಗ ಹಿಡಕೊಂಡ ಅಡ್ಯಾಡಕ್ಕತ್ತಾರ್
ಈ ರಸ್ತೆ ನೋಡ್ರಿ ಇದು ಹುಬ್ಬಳ್ಳಿ ಸಿಬಿಟಿಯಿಂದ ಶಾ ಬಜಾರ್ ಕ್ಕ ಹೋಗು ರೋಡ ಇಲ್ಲಿ ಒಳಚರಂಡಿ ಒಡೆದು ಗಬ್ಬ ನಾರಾಕತ್ತೇತಿ.. ಮಂದಿ ಮಕ್ಕಳು ಈ ರಸ್ತೆ ದಾಟಬೇಕಂದ್ರ ಉಸಿರು ಗಟ್ಟಿ ಹಿಡಕೊಂಡ ದಾಟಬೇಕು.. ಈ ರಸ್ತೆ ಆಕಡೆ ಈ ಕಡೆ ಇರುವ ಅಂಗಡಿ ವ್ಯಾಪಾರಸ್ಥರ ಪಾಡ ಹೇಳತ್ತಿರದ್ದ ನೋಡ್ರಿ..
ಈ ದುಸ್ಥಿತಿ ನೋಡಿ ನೋಡಿ ಸಾಕಾಗಿ ಅಲ್ಲಿ ಮಂದಿನ ಕಾರ್ಪೊರೇಷನ್ ಗೆ ಪೋನ್ ಮಾಡಿದ್ರ ಅವ್ರ ಬಂದ್ರ ಒಡದ ಚರಂಡಿ ಅರ್ಧಂಬರ್ಧ ಮುಚ್ಚಿ ಹೋಗ್ಯಾರ್, ಇವತ್ತ ಮಾಡಿದ್ದ ಮತ್ತ ನಾಳಿಗೆ ಒಡದ ಹೋಗಿತಿ ಇದು ಕಾರ್ಪೊರೇಷನ್ ಅವರ ಕಾರ್ಯ..
ಇನ್ನ ಈ ರೋಡನ್ಯಾಗ್ ಎಲ್ಲಿಯೂ ಗಟ್ಟಾರ ಇಲ್ಲಾ , ಒಡದ ಚರಂಡಿ ಹರದ ರಸ್ತೆ ಏನ್ ರೀ ನಮ್ಮ ಮಂದಿ ಪಾಡು.. ಪಾಲಿಕೆ ಚುನಾವಣೆ ಬಂದೇತಿ ಟಿಕೆಟ್ ಕೊಡ್ರಿ..ನನಗ ಕೊಡ್ರಿ ನನಗ ಕೊಡ್ರಿ ಅಂತ ಬಡಕೊಳ್ಳಾಕತ್ತಿರಾರ.. ಜನಪ್ರತಿನಿಧಿಗಳು ಮತ್ತ ಇದ್ದು ಇಲ್ಲದಂಗ ಇರುವ ಹು.ಧಾ.ಮಹಾನಗರ ಪಾಲಿಕೆ ಇತ್ತ ಕಡೆ ನೋಡ್ರಿ ಮಂದಿಗ ಅನುಕೂಲ ಮಾಡಿ ಕೊಡ್ರಿ..
Kshetra Samachara
19/08/2021 05:01 pm