ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾಜಿ ಸಿಎಂ,ಕೇಂದ್ರ ಸಚಿವರಿದ್ದರೂ ಆಗಿಲ್ಲ: ನೂತನ ಸಚಿವರಾದರೂ ಧೂಳು ಮುಕ್ತ ಮಾಡುತ್ತಾರೆಯೇ?

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತೀ ದೊಡ್ಡ ನಗರ ಎನ್ನುವ ಖ್ಯಾತಿ ಪಡೆದಿರುವ ನಗರ. ಅಷ್ಟೇ ಏಕೆ ಆ ನಗರ ಸುಂದರ ಹಾಗೂ ಅಭಿವೃಧಿ ಹೊಂದಲಿ ಅಂತ ಸ್ಮಾರ್ಟ್​ ಸಿಟಿ ಯೋಜನೆ ಘೋಷಣೆಯಾಗಿತ್ತು. ಆದರೆ ಇಲ್ಲಿಯವರೆಗೆ ಯಾವ ಕಾಮಗಾರಿಯೂ ಮುಗಿದಿಲ್ಲ. ಎಲ್ಲೆಂದರಲ್ಲಿ ರಸ್ತೆಗಳು ಅಗೆದು ಜನರನ್ನು ಹೈರಾಣ ಮಾಡುತ್ತಿವೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಸುರಿದ ಮಳೆ, ಆ ರಸ್ತೆಗಳ ಪರಸ್ಥತಿಯನ್ನೇ ಹಾಳು ಮಾಡಿವೆ.

ಹುಬ್ಬಳ್ಳಿ-ಧಾರವಾಡ ಅವಳಿನಗರ ರಾಜ್ಯದ ಅತಿದೊಡ್ಡ ನಗರಗಳು. ಅಲ್ಲದೇ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆಯೂ ಹೌದು. ಹೀಗಾಗಿಯೇ ಇದನ್ನು ವಾಣಿಜ್ಯ ನಗರಿ ಛೋಟಾ ಮುಂಬಯಿ ಅಂತಲೂ ಕರೆಯುತ್ತಾರೆ. ಯಾಕೆಂದರೆ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳು ವ್ಯಾಪರ ವಹಿವಾಟಿಗೆಂದು ಇದೇ ನಗರವನ್ನೇ ಮೆಚ್ಚಿಕೊಂಡಿವೆ. ಆದರೆ ಈ ನಗರದ ರಸ್ತಗಳ ಪರಸ್ಥತಿ ಕೇಳಿದ್ರೆ ಎಂಥವರು ಛೀ..ಥೂ..ಎನ್ನವಂತಿದೆ. ಕಳೆದೊಂದು ದಶಕದಿಂದಲೂ ಇಲ್ಲಿನ ರಸ್ತೆಗಳ ಪರಸ್ಥಿತಿ ಬದಲಾವಣೆ ಆಗ್ತಿಲ್ಲ. ಅಲ್ಲದೆ ಕಳೆದ ಮೂರು ವರ್ಷಗಳ ಹಿಂದೆ ನಗರದ ರಸ್ತೆಗಳು ಹಾಗೂ ನಗರ ಅಭಿವೃಧಿ ಪಡೆಸಲು ಸ್ಮಾರ್ಟ್​ ಸಿಟಿ ಯೋಜನೆಯೂ ಸಿಕ್ಕಿತ್ತು. ಇದಾದ ಮೇಲಾದರೂ ನಗರದ ರಸ್ತೆಗಳ ಪರಸ್ಥತಿ ಸುಧಾರಿಸುತ್ತೆ ಎಂದುಕೊಂಡಿದ್ದ ಜನರ ನೀರಿಕ್ಷೆ ಮತ್ತಷ್ಟು ಅದ್ವಾನಕ್ಕಿಳಿಸಿದೆ. ಯಾಕೆಂದರೆ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿದ್ದಾರೆ. ಪಾಲಿಕೆ ಹಾಗೂ ಸ್ಮಾರ್ಟ್​ ಸಿಟಿ ಕಂಪನಿ ಸಮನ್ವಯದ ಕೊರತೆಯಿಂದ ಸದ್ಯ ನಗರದ ಪ್ರಮುಖ ರಸ್ತೆಗಳ ಹೇಳತೀರದಾಗಿದೆ. ನಗರಾಭೀವೃಧಿ ಸಚಿವರಾಗಿರೋ ಭೈರತಿ ಬಸವರಾಜ ಇನ್ನೆರಡು ತಿಂಗಳಲ್ಲಿ ಹಲವಾರು ಕಾಮಗಾರಿಗಳನ್ನು ಮುಗಿಸಿ ಲೋಕಾರ್ಪಣೆ ಮಾಡ್ತಿವಿ ಎಂದಿದ್ದರು. ಆದರೆ ಸಧ್ಯ ಮೂರು ತಿಂಗಳು ಕಳೆದರೂ ಇನ್ನು ಯಾವುದೇ ಕೆಲಸ ಆಗಿಲ್ಲ.

ನೂತನವಾಗಿ ಸಚಿವರಾಗಿರುವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಬೆಟ್ಟದಷ್ಟು ಸವಾಲು ಎದುರಾಗಿವೆ.. ಅದರಲ್ಲಿ ಮೊದಲನೆಯದ್ದೆ ಈ ಸ್ಮಾರ್ಟ್​ ಸಿಟಿ ಕಾಮಗಾರಿಗಳು ಕಿರಿಕರಿ. ಜಿಲ್ಲೆಯಲ್ಲಿ ಓರ್ವ ಮಾಜಿ ಸಿಎಂ, ಓರ್ವ ಕೇಂದ್ರ ಸಚಿವರು ಹಾಗೂ ನೂತನ ರಾಜ್ಯ ಸರ್ಕಾರದ ಸಚಿವರಿದ್ದರೂ ರಸ್ತೆಗಳನ್ನು ಸುಧಾರಣೆ ಮಾಡೋಕೆ ಆಗ್ತಿಲ್ಲ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಅದು ಯಾವಾಗ ಸಚಿವರು ಮನಸ್ಸು ಮಾಡ್ತಾರೋ ಅದ್ಯಾವ ನಗರದ ರಸ್ತೆಗಳು ಸ್ಮಾರ್ಟ್​ ಆಗ್ತಾವೋ ಎಂದು ಜನ ಬಿಟ್ಟ ಆಸೆ ಕಣ್ಣಿನಿಂದ ನೋಡುತ್ತಿದ್ದಾರೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

10/08/2021 06:36 pm

Cinque Terre

69.79 K

Cinque Terre

10

ಸಂಬಂಧಿತ ಸುದ್ದಿ