ಹುಬ್ಬಳ್ಳಿ: ಮಳೆ ಇಲ್ಲಾ ಆದ್ರು ಕೂಡಾ ಚರಂಡಿ ನೀರು ತುಂಬಿ, ಗಟರ ಮೂಲಕ ಹರಿದು, ಚರಂಡಿ ನೀರು ಈಗ ಮನೆಯ ಒಳಗೆ ನುಗ್ಗುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ನಗರದ ವೀರಾಪೂರ ಓಣಿಯ ಖನವಳ್ಳಿ ಚಾಳ ಗೌಳರ ಓಣಿಯಲ್ಲಿ.
ಕಳೆದ ಒಂದು ವಾರದಿಂದ ಈ ಸಮಸ್ಯೆಯನ್ನು ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು, ಎಷ್ಟೋ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರು ಕೂಡಾ ಯಾರು ಕ್ಯಾರೆ ಮಾಡುತ್ತಿಲ್ಲಾ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
Kshetra Samachara
09/08/2021 03:47 pm