ಹುಬ್ಬಳ್ಳಿ: ವಾಣಿಜ್ಯ ನಗರಿಯ ಪ್ರಮುಖವಾದ ಕ್ರೀಡಾಂಗಣ ನೆಹರು ಮೈದಾನ, ಇದನ್ನು ಬಂದ್ ಮಾಡಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಪುನರಾಭಿವೃದ್ಧಿ ಮಾಡುತ್ತಿದ್ದು, ಕಾಮಗಾರಿ ಮಾತ್ರ ಹೇಗೆ ಸಾಗುತ್ತಿದೆ ಎಂಬುದನ್ನ ನಾವು ತೋರಿಸ್ತೆವಿ ನೋಡಿ.... ಹೌದು,,,, ನೆಹರು ಮೈದಾನವನ್ನು ಕಾಮಗಾರಿ ಮಾಡುತ್ತಿದ್ದು ಸುಮಾರು ಒಂದೂವರೆ ವರ್ಷ ಆಯಿತು. ಆದ್ರು ಕೂಡಾ ಕೆಲಸ ಮಾತ್ರ ಆಮೆ ರೀತಿಯಲ್ಲಿ ನಡಿಯುತ್ತಿದೆ. ಇದನ್ನ ನೋಡುತ್ತಿದ್ದರೆ ಇವರಿಗೆ ಈ ಮೈದಾನ ಬೇಗ ಮುಗಿಸಿ ಕ್ರೀಡಾಪಟುಗಳಿಗೆ ಆಟ ಆಡಲು ಬಿಟ್ಟುಕೊವುದು ದೂರದ ಮಾತಾಗಿದೆ. ಇತ್ತ ಗ್ರೌಂಡ್‌ಗಳು ಇಲ್ಲದೆ ಕ್ರೀಡಾಪಟುಗಳು, ಮತ್ತು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 20.2 ಕೋಟಿ ರೂ.ಮೊತ್ತದ ಕಾಮಗಾರಿ ನಡೆಯುತ್ತಿದೆ. ಕ್ರೀಡಾಪಟುಗಳು ಕಳೆದ ಎರಡು ವರ್ಷದಿಂದ ಅಭ್ಯಾಸ ಮಾಡಲು ಮೈದಾನ ಇಲ್ಲದೆ ತೊಂದರೆಗೀಡಾಗಿದ್ದಾರೆ.ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಗದಿಪಡಿಸಿದ ಪ್ರಕಾರ, ಡಿಸೆಂಬರ್ ವೇಳೆಗೆ ಶೇಕಡಾ 80% ಕ್ಕಿಂತ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಕಾರಿಗಳು ತಿಳಿಸಿದ್ದರು. ಆದರೆ ಕಾಮಗಾರಿ ಸಾಗುವ ವೇಗ ನೋಡಿದರೆ ಅವರ ಮಾತನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಹುಬ್ಬಳ್ಳಿ ಜನರಿಗೆ ಅನುಕೂಲ ಮಾಡಿಕೊಡಬೆಕೆಂದು ಮನವಿ ಮಾಡಿದ್ದಾರೆ.
ಈರಣ್ಣ ವಾಲಿಕಾರ,
ಪಬ್ಲಿಕ್ ನೆಕ್ಸ್ಟ್
Kshetra Samachara
07/08/2021 03:31 pm