ಹುಬ್ಬಳ್ಳಿ: ಜೋಗ ಫಾಲ್ಸ್ ವೀಕ್ಷಣೆಗೆ ರವಿವಾರ ಮತ್ತು ಸಾರ್ವಜನಿಕ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ವೋಲ್ವೊ ಮತ್ತು ರಾಜಹಂಸ ಮಾದರಿಯ ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ. ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ.ವಿಶ್ವ ವಿಖ್ಯಾತ ಜೋಗ ಫಾಲ್ಸ್ ಮೈದುಂಬಿಕೊಂಡಿದೆ.ಹುಬ್ಬಳ್ಳಿ ಯಿಂದ ಜೋಗ ಫಾಲ್ಸ್ ಗೆ ವಾರಾಂತ್ಯ ದಿನಗಳಂದು ಶನಿವಾರ ಮತ್ತು ರವಿವಾರ ಹಾಗೂ ಸಾರ್ವಜನಿಕ ರಜೆ ದಿನ ಈಗಾಗಲೆ ವೇಗದೂತ ಮಾದರಿಯ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಯಾತ್ರಿಗಳಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಮತ್ತು ರಾಜಹಂಸ ಬಸ್ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಸ್ವಂತ ವಾಹನಕ್ಕೆ ಹೋಲಿಸಿದಾಗ ಪ್ರಯಾಣ ದರ ಬಹಳ ಮಿತವ್ಯಯಕರ. ಮಳೆಗಾಲದಲ್ಲಿ ಘಟ್ಟ ಪ್ರದೇಶಗಳಲ್ಲಿ ಸ್ವಯಂ ವಾಹನ ಚಾಲನೆ ಕಷ್ಟಕರ.ಇದರಿಂದ ಪ್ಯಾಕೇಜ್ ಟೂರ್ ಬಸ್ ಗೆ ಬೇಡಿಕೆ ಹೆಚ್ಚಿದೆ.
ರಾಜಹಂಸ ಬಸ್ ಬೆಳಿಗ್ಗೆ 7-45ಕ್ಕೆ ಹೊರಡುತ್ತದೆ. ಹೋಗಿ ಬರಲು ಸೇರಿ ಪ್ರಯಾಣ ದರ ರೂ.435 ನಿಗದಿಪಡಿಸಲಾಗಿದೆ. ವೋಲ್ವೋ ಬಸ್ ಬೆಳಿಗ್ಗೆ 8-00 ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ.605 ನಿಗದಿಪಡಿಸಲಾಗಿದೆ.ಇವುಗಳೊಂದಿಗೆ ಹಿಂದಿನಂತೆ ವೇಗದೂತ ಬಸ್ ಬೆಳಿಗ್ಗೆ 7-30 ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ.350.
ಈ ವಿಶೇಷ ಬಸ್ ಗಳಿಗೆ
ಹೋಗುವಾಗ ಶಿರಸಿಯಲ್ಲಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12-30ರಿಂದ 1-00ಕ್ಕೆ ಜೋಗ ತಲುಪುತ್ತವೆ. ಅಲ್ಲಿ ಸ್ಥಳ ವೀಕ್ಷಣೆ, ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶ ವಿರುತ್ತದೆ. ಸಂಜೆ ಜೋಗದಿಂದ ಬಿಟ್ಟು ರಾತ್ರಿ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತವೆ.
ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಪ್ರಯಾಣಿಕರು 72 ಗಂಟೆ ಮುಂಚಿತವಾಗಿ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದಲೇ ಆಹಾರ ಮತ್ತು ಕುಡಿಯಲು ನೀರು ತೆಗೆದುಕೊಂಡು ಬರುವುದು ಸೂಕ್ತ.
ಈ ವಿಶೇಷ ಬಸ್ ಗಳಿಗೆ www.ksrtc.in ವೆಬ್ ಸೈಟ್ ನಲ್ಲಿ ಮತ್ತು ಹೊಸೂರು ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬಸ್ ನಿಲ್ದಾಣ ಅಧಿಕಾರಿಗಳನ್ನು ಮೊ. 7760991662 / 682 ಅಥವ ಘಟಕ ವ್ಯವಸ್ಥಾಪಕರನ್ನು 7760991677(ವೇಗದೂತ ಬಸ್)/7760991674(ವೊಲ್ವೊ ಮತ್ತು ರಾಜಹಂಸ ಬಸ್) ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
Kshetra Samachara
06/08/2021 07:41 pm