ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾಪುರ ಕೆರೆಗೆ ಬಾಗಿನ ಅರ್ಪಣೆ

ಅಳ್ನಾವರ: ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದ ಕೆರೆ ಕಳೆದ ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಭರ್ತಿ ಯಾಗಿದೆ.ಪ್ರತಿ ವರ್ಷದ ವಾಡಿಕೆಯಂತೆ ಗ್ರಾಮದ ಕೆರೆಗೆ ಈ ವರ್ಷವು ಕೂಡ 'ಬಾಗಿನ ಅರ್ಪಣೆ' ಮಾಡಲಾಯಿತು. ಹೂ,ಹಣ್ಣು,ತಾಂಬೂಲ, ಹಸಿರು ಬಳೆ, ಸೀರೆ ಸಮೇತ ಆರತಿ ಹಿಡಿದು,ಗ್ರಾಮದ ಹೆಣ್ಣು ಮಕ್ಕಳು ಹಾಗೂ ಹಿರಿಯರು ತಾಯಿ ಗಂಗಾ ಮಾತೆಗೆ ಬಾಗಿನ ಅರ್ಪಿಸಿದರು.

ಹೊನ್ನಾಪುರ ಗ್ರಾಮದ ಜನರಿಗೆ ಈ ಕೆರೆ ಜೀವನಾಡಿ.ಗ್ರಾಮದ ಸುತ್ತ ಮುತ್ತಲಿರುವ ಹೊಲ,ಗದ್ದೆ ಹಾಗೂ ದನ ಕರುಗಳಿಗೆ ಬೇಸಿಗೆಯಲ್ಲಿ ಈ ಕೆರೆಯೇ ಆಧಾರ.ಈ ಕೆರೆಯ ಉಪಕಾರ ನಮ್ಮೆಲ್ಲರ ಮೇಲಿದೆ.ಬಾಗಿನ ಅರ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಕಲಾಜ 'ಪಬ್ಲಿಕ್ ನೆಕ್ಸ್ಟ್' ತಿಳಿಸಿದರು.

ಬಾಗಿನ ಅರ್ಪಿಸುವ ಸುಂದರ ಕ್ಷಣದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಆಪ್ತ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮದ ಹಿರಿಯರಾದ ಎಚ್,ಆರ್,ಸನದಿ ಬಸಪ್ಪ ಚಿಕ್ಕಣ್ಣವರ,ಗ್ರಾಮ ಪಂಚಾಯಿತಿ ಸದಸ್ಯ ರಾದ ತೇಜಸ್ ದೊಡಮಣಿ,ಪಾರುಕ ಅಂಬಡಗಟ್ಟಿ ಹಾಗೂ ಗ್ರಾಮದವರೆಲ್ಲರು ಉಪಸ್ಥಿತರಿದ್ದರು.

ವರದಿ:ಮಹಾಂತೇಶ ಪಠಾಣಿ

Edited By : Nirmala Aralikatti
Kshetra Samachara

Kshetra Samachara

03/08/2021 06:07 pm

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ