ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇವರು ಕಸ ಚೆಲ್ಲೋದನ್ನ ಬಿಡೋದಿಲ್ಲಾ, ಅವರು ಕಸ ತೆಗೆಯೋಕೆ ಬರೋದಿಲ್ಲಾ

ನವಲಗುಂದ : ಪಟ್ಟಣದ ಬಸವೇಶ್ವರ ನಗರದಲ್ಲಿನ ಕರ್ಮಕಾಂಡ ಇದು, ಈ ದುರಾವಸ್ಥೆಗೆ ಕಾರಣ ಹೇಳೋದೇ ಕಷ್ಟ ಅನಿಸುತ್ತೆ, ಇಲ್ಲಿ ಸಾರ್ವಜನಿಕರು ಕಸ ಚೆಲ್ಲೋದನ್ನ ಬಿಡ್ತಾ ಇಲ್ಲಾ, ಅದನ್ನ ಪುರಸಭೆ ಸಿಬ್ಬಂದಿಗಳು ಸ್ವಚ್ಛಗೊಳಿಸುತ್ತಿಲ್ಲಾ, ಇದರಿಂದ ಸಮಸ್ಯೆ ಮಾತ್ರ ಸ್ಥಳೀಯರಿಗೆ ಎಂಬುದು ಸ್ಥಳೀಯರಿಗೆ ತಿಳಿತಾ ಇಲ್ಲಾ....

ಹೌದು ಈ ನಗರದಲ್ಲಿ ಸಮಸ್ಯೆಗಳನ್ನು ಹುಡುಕುತ್ತಾ ಹೊರಟರೆ ಒಂದರ ಮೇಲೊಂದಂತೆ ಹುಟ್ಟುತ್ತಲೇ ಹೋರಡುತ್ತೆ, ಅದರಲ್ಲೂ ಈ ಬಸವೇಶ್ವರ ನಗರದ ಹಳ್ಳಿಕೇರಿಗೆ ಹೋಗುವ ರಸ್ತೆಯ ಬದಿಯಲ್ಲಂತೂ ಕಸ ಮತ್ತು ಕೊಳಚೆಯಿಂದ ತುಂಬಿ ತುಳುಕುತ್ತಿದೆ. ಪುರಸಭೆಯ ಕಸ ವಿಲೇವಾರಿ ವಾಹನ ಬಂದರೂ ಸಹ ಸ್ಥಳೀಯರು ಇಲ್ಲೇ ಕಸ ಚೆಲ್ಲುತ್ತಿದ್ದಾರಂತೆ, ಸ್ಥಳೀಯರು ಏಚ್ಛೆತ್ತು ತಮ್ಮ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಬಗ್ಗೆ ಅರಿತು ನಡೆಯಬೇಕಿದೆ. ಇನ್ನು ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸಿ ನಿರ್ವಹಣೆ ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

03/08/2021 02:42 pm

Cinque Terre

36.72 K

Cinque Terre

0

ಸಂಬಂಧಿತ ಸುದ್ದಿ