ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂಬರ 39 ರಲ್ಲಿ ಜನರು ಗೋಳು ಹೇಳ ತೀರದು! ಚರಂಡಿ ನೀರಿನಲ್ಲಿ ಅವರ ಬದುಕು

ಹುಬ್ಬಳ್ಳಿ: ಇತ್ತ ಪಾಲಿಕೆಯಲ್ಲಿ ಕಾರ್ಪೊರೇಟರ್ ಇಲ್ಲಾ, ಅದೇ ರೀತಿ ವಾರ್ಡ್‌ಗಳಲ್ಲೂ ಸಮಸ್ಯೆಗಳು ಮಾತ್ರ ಆಕಾಶಕ್ಕೆ ಏರುತ್ತಿವೆ. ಹೌದು,,,ಹೀಗೆ ರಸ್ತೆಯಲ್ಲಿ ಕಸ, ಮನೆ ಮುಂದೆ ಹರಿಯುತ್ತಿರುವ ಚರಂಡಿ ನೀರು, ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ವಾರ್ಡ್ ನಂಬರ 39 ಸುಭಾಷ್ ನಗರದಲ್ಲಿ.

ಚರಂಡಿ ನೀರಿನಲ್ಲಿ, ಗಬ್ಬು ವಾಸನೆಯಲ್ಲಿ ತಮ್ಮ ಜೀವನ ಕಳೆಯಬೇಕಾಗಿದೆ. ಅಷ್ಟೇ ಅಲ್ಲದೆ ಕಸದ ಗಾಡಿ ವಾರಕ್ಕೆ ಒಂದು ಸಾರಿ ಬರುವುದರಿಂದ ಜನರು ಕಸವನ್ನು ರೋಡಿನಲ್ಲಿ ಹಾಕುತ್ತಿದ್ದಾರೆ. ಗಟರ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಮನೆಗೆ ನುಗ್ಗುತ್ತಿದೆ. ಪಾಲಿಕೆ ಅಧಿಕಾರಿಗಳಿಗೆ ಅದೆಷ್ಟೋ ಸಾರಿ ದೂರು ನೀಡಿದರು ಕ್ಯಾರೆ ಎನ್ನುತ್ತಿಲ್ಲಾ ಎಂದು ಅಲ್ಲಿನ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ ನೀವೆ ಕೇಳಿ...

Edited By : Shivu K
Kshetra Samachara

Kshetra Samachara

01/08/2021 12:30 pm

Cinque Terre

89.52 K

Cinque Terre

9

ಸಂಬಂಧಿತ ಸುದ್ದಿ