ಹುಬ್ಬಳ್ಳಿ: ರೈಲ್ವೆ ದರ ಹೆಚ್ಚಳ! ಕಂಗಾಲಾದ ಪ್ರಯಾಣಿಕರು, ಕಾರ್ಮಿಕರು

ಹುಬ್ಬಳ್ಳಿ: ತೈಲ ಬೆಲೆ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ, ಇದೀಗ ಬಡವರ ಸಾರಿಗೆ ಎಂದೇ ಕರೆಯಿಸಿಕೊಳ್ಳುವ ರೈಲ್ವೆ ಪ್ರಯಾಣದ ದರ ಕೂಡಾ ಹೆಚ್ಚಾಗಿದ್ದು, ದರ ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಹೌದು, ಮೊದಲೇ ಲಾಕ್ ಡೌನ್, ಕೊರೋನಾದಿಂದ ಹಲವಾರು ಜನರು ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಇದೀಗ ಕೋವಿಡ್ ಎರಡನೇ ತಗ್ಗಿದ ಬೆನ್ನಲ್ಲೇ ಸಾರಿಗೆ ಸಂಪರ್ಕ ಕೂಡಾ ಆರಂಭಗೊಂಡಿದ್ದು, ಅದರ ಜೊತೆಗೆ ರೈಲು ಸಂಚಾರವು ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಜನರು ಕೆಲಸ ಅರಿಸಿ ಪಟ್ಟಣಗಳತ್ತ ಮುಖ ಮಾಡುತ್ತಾ ಇದ್ದಾರೆ. ಆದರೆ ರೈಲುಗಳನ್ನು ಹೆಚ್ಚಾಗಿ ನಂಬಿ ಕೂಲಿ ಹಾಗೂ ಇನ್ನಿತರ ಕೆಲಸ ಅರಿಸಿ ಕಾರ್ಮಿಕರು, ನಿತ್ಯ ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಂದ ಹುಬ್ಬಳ್ಳಿಗೆ ಆಗಮಿಸುವ ಜನರಿಗೆ ರೈಲು ಪ್ರಯಾಣದ ದರ ಕಂಗಾಲು ಮಾಡಿದೆ.

ಕೋವಿಡ್ ಮುಂಚೆ ಗುಡಗೇರಿಯಿಂದ ಹುಬ್ಬಳ್ಳಿಗೆ 10 ರೂ ದರವಿತ್ತು. ಇದೀಗ ಆ ದರ 30 ರೂ ಆಗಿದೆ. ಮೊದಲೇ ಕೋವಿಡ್‌ನಿಂದಾಗಿ ಅನೇಕ ಕೂಲಿ ಕಾರ್ಮಿಕರಿಗೆ ದುಡಿಮೆಯಿಲ್ಲ. ಹಿಂದೆ ಗಳಿಸಿದ ಆದಾಯದಲ್ಲಿಯೇ ಅಷ್ಟಿಷ್ಟು ಉಳಿಸಿಕೊಂಡು ಲಾಕ್‌ಡೌನ್‌ ಅವಧಿಯಲ್ಲಿ ಜೀವನ ನಡೆಸಿದ್ದರು. ಈಗ ಪ್ರಯಾಣದ ದರವೂ ಇಳಿಕೆಯಾಗದ ಕಾರಣ ಕಾರ್ಮಿಕರಿಗೆ ಹೊರೆಯಾಗಿದೆ.

ಈರಣ್ಣ ವಾಲಿಕಾರ,
ಪಬ್ಲಿಕ್ ನೆಕ್ಸ್ಟ್

Kshetra Samachara

Kshetra Samachara

2 months ago

Cinque Terre

40.72 K

Cinque Terre

14

 • Uttam
  Uttam

  ಮೊದಲೇ ಕರೋನಾ ಕಾಲ. ಜನ ಎಂದಿನಂತೆ ಪ್ರಯಾಣಿಸುತ್ತಿಲ್ಲ. ಜನ ಪ್ರಯಾಣಿಸಿದರೆ ರೈಲ್ವೆ ಇಲಾಖೆಗೆ ಆದಾಯ. ಹೆಚ್ಚು ಕಡಿಮೆ ಕಳೆದ ಒಂದೂವರೆ ವರ್ಷದಿಂದ ಅದು ನಷ್ಟದಲ್ಲಿಯೇ ಇದೆ. ಹೀಗಾಗಿ ರೆಗ್ಯೂಲರ ಟ್ರೇನಗಳ ಓಡಾಟ ಇಲ್ಲ. ಮೇಲಾಗಿ ರೈಲ್ವೆ ಇಲಾಖೆಯ ನೌಕರರ ಸಂಬಳ ಕೊಡಬೇಕು. ಅಪಾರವಾದ ಎಲೆಕ್ಟ್ರಿಸಿಟಿ ಬಿಲ್ ತುಂಬೇಕು, ಡಿಸೇಲ್ ಖರ್ಚು ತೆಗೆಯಬೇಕು. ಇದಕ್ಕೆಲ್ಲ ಹಣ ಹೊಂದಿಸಲು ಎರಡೇ ಉಪಾಯಗಳು. ಒಂದೋ ನಮ್ಮ ಎಲ್ಲಾ ದಿನ ಬಳಕೆಯ ವಸ್ತುಗಳ ಮೇಲೆ ತೆರಿಗೆ ಹಾಕಬೇಕು ಅಥವಾ ರೈಲನ್ನು ಬಳಸುವ ಪ್ರಯಾಣಿಕರಿಂದ ಹೆಚ್ಚಿನ ಚಾರ್ಜು ವಸೂಲಿ ಮಾಡಬೇಕು. ಸರಕಾರಕ್ಕೆ ಹಣ ಆಕಾಶದಿಂದ ಉದುರುವದಿಲ್ಲ ಎಂಬುದನ್ನೂ ಮರೆಯುವಂತಿಲ್ಲ. ಒಂದು ಮನೆಯ ಆದಾಯ ಕಡಿಮೆಯಾದಾಗ ಮನೆ ನಡೆಸುವದು ಎಷ್ಟು ಕಷ್ಟವೋ ಅಷ್ಟೇ ಒಂದು ಸಂಸ್ಥೆಯನ್ನು ನಡೆಸುವಾಗ ಅದರ ಆದಾಯ ಕಡಿಮೆಯಾದಾಗ ಅದನ್ನು ನಡೆಸುವದು ಅಷ್ಟೇ ಕಷ್ಟ ಎಂಬುದು ಯಾರಿಗಾದರೂ ಅರ್ಥವಾಗುವ ವಿಷಯ. (ಮೋದಿಜಿಯನ್ನು ವಿರೋಧಿಸಲೇ ಬೇಕೆಂದು ಹಟ ತೊಟ್ಟವರನ್ನು ಹೊರತುಪಡಿಸಿ ಯಾರಿಗಾದರೂ ಅರ್ಥವಾಗುವ ವಿಷಯ. ) ವಿರೋಧಕ್ಕಾಗಿಯೇ ವಿರೋಧ ಮಾಡುವವರಿಗೆ ಮೋದಿಜಿ‌ ಏನೇ ಉಪಕಾರ ಮಾಡಿದರೂ ಅವರಿಗೆ ಲೆಕ್ಕಕಿಲ್ಲ. ಹೋಗಲಿ ಬಿಡಿ, ರಾಮಾಯಣದ ರಾಮನಿಗೇ ಅಗಸನೊಬ್ಬ ಟೀಕಿಸಿದ. ಇನ್ನು ಮೋದಿಜಿಯಂತಹ ಮನುಷ್ಯರು ಯಾವ ಲೆಕ್ಕ!

 • Ikhalas Iklu
  Ikhalas Iklu

  ಸತ್ಯ ಇಲ್ಲಿದೆ ನೋಡಿ ಮೊದಲ್ನೆ lockdown ಬಳಿಕ ಮೋದಿ ಸರ್ಕಾರ ಜನರನ್ನು ಮೂರ್ಖ ಮಾಡಿ ಎಲ್ಲಾ ಟ್ರೈನ್ ಸಂಖ್ಯೆ ಬದಲಿಸಿ ಸ್ಪೆಷಲ್ ಟ್ರೈನ್ ಎಂದು ಹೇಳಿ ದುಪಟ್ಟು ಹಣ್ಣ ವಸೂಲಿ ಮಾಡುತ್ತಿದ್ದಾರೆ.ರೈಲ್ವೇ ನಿಯಮ ಪ್ರಕಾರ ಸ್ಪೆಷಲ್ ಟ್ರೈನ್ ಓಡಿಸಿದರೆ ಜಾಸ್ತಿ rate ಹೀಗೆ ಮಾಡಿ ಯಾರಿಗೂ ಗೊತ್ತಾಗದಂತೆ ಲೂಟಿ ನಡೆದಿದೆ ಪ್ಯಾಸೆಂಜರ್ ರೈಲು ಅಂತು ಸಂಪೂರ್ಣ ಬಂದ್ ಆಗಿದೆ ಎಕೆಂದರೆ ಅದರಿಂದ ಬಡ್ ಜನರಿಗೆ ಸಹಾಯ ಆಗುತ್ತದೆ.ಆದ್ದರೇ ಇದರಿಂದ ಸರ್ಕಾರ ಖಜಾನೆ ಕಡಿಮೆಯಾಗುತ್ತಿದೆ ಉದ್ಯಮಿ ಅವರಿಗೆ ಕೊಡುವುದು ಗೊತ್ ಫೆಕೂ ಗೆ ಜನ ಸಾಮಾನ್ಯ ಮೇಲೆ ಬರೆ ಕೊಡುವುದು

 • Ikhalas Iklu
  Ikhalas Iklu

  Uttam, ಅದು ಸರಿ ಇದ್ದೆ ಸುದ್ದಿ ಸುಳ್ಳಲ

 • Ikhalas Iklu
  Ikhalas Iklu

  mahesh, ಅವರು ಹೇಳೋದು ಸರಿ ಸುಳ್ಳಲ್

 • mahesh
  mahesh

  Jai javan jai kisan, oppose ಮಾಡಲಿಕ್ ಬೇಡ antilla but riti ಬೇರೆ ಇದೇ... ಮಾಡ್ರಿ ನಾವು ಅದಕ್ಕೆ ಬೇಡ annalla ಅದ್ರ ಅದಕ್ಕೆ ಬೇರೆ ವಿಷಯ kudistarala ಅದು ಸರಿ ಇಲ್ಲ

 • mahesh
  mahesh

  Jai javan jai kisan, ಮಾರ್ಕೆಟ್ ಮಾಡಿ? ಹಿಂಗ್ ಅಂದ್ರ Ollenne rate ಒಂದ ಹೇಳತಿ.... matta innonda ಎರಡು aitem... ಅಷ್ಟ....

 • Jai javan jai kisan
  Jai javan jai kisan

  ಅಂಧ್ ಭಕ್ತರು ಹಾಗೂ ಏಕ ವ್ಯಕ್ತಿ ಗುಲಾಮರಿಗೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯ ಏರಿದ್ದ ಕಾಣುವದಿಲ್ಲಾ ಇನ್ನು ಬೇರೆಯವರ ಹಬ್ಬ ಮಾಡುವದು ಕಣ್ಣಗೆ ಕಾಣುತ್ತೆದೇ ಹಾಗೂ ದಿನವಸ್ತುಬಳಕೆ ತುಟ್ಟಿ ಆಗಿದೆಯಾ ಎಂದು ಕೆಲವು ಅಂಧ್ ಭಕ್ತರು ಹಾಗೂ ಏಕವ್ಯಕ್ತಿ ಗುಲಾಮರು ಇದ್ದಾರೆ 🙄

 • Prakash Vantakar
  Prakash Vantakar

  idu prachodanatmaka sullu suddi. PN spashtane kodi

 • mahesh
  mahesh

  ನೀವು ಕೆಟ್ಟ ಪದ ಬಳಸಬೇಡಿ ಅಂಥ report ಮಾಡತಿರ... ಈಗಾ ಸುಳ್ಳ ಸುದ್ದಿ ಹಾಕಿದಿರಿ ನಾವು ಯಾರಿಗೆ report ಮಾಡನಾ.. 🤔🤔

 • mahesh
  mahesh

  ಸುಳ್ಳು ಸುದ್ದಿ... ಇನ್ನೂ passenger train start ಆಗಿಲ್ಲ.. ಗುಲಾಮರು ಈಗಾ ಹಬ್ಬ ಮಾಡುತ್ತಾರೆ... ಈ ಸುಳ್ಳು ಸುದ್ದಿ ಇಟ್ಟುಕೊಂಡು