ಕುಂದಗೋಳ: ತಹಶೀಲ್ದಾರ ಕಚೇರಿಯಲ್ಲಿ ಸಂಗ್ರಹವಾದ ಕಲುಷಿತ ನೀರಿಗೆ ಮುಕ್ತಿ

ಕುಂದಗೋಳ : ಕಳೆದ ವರ್ಷ ಅತಿವೃಷ್ಟಿ ಮಳೆಗೆ ತಹಶೀಲ್ದಾರ ಕಚೇರಿಯಲ್ಲಿ ನೀರು ತುಂಬಿ ಕಚೇರಿ ಅವ್ಯವಸ್ಥೆ ಹಾದಿ ಈ ಹಿಡಿದಿತ್ತು, ಈ ಬಾರಿ ಬೇಸಿಗೆಯಲ್ಲೇ ಸುರಿದ ಅಕಾಲಿಕ ಮಳೆಗೆ ತಹಶೀಲ್ದಾರ ಕಚೇರಿ ಆವರಣ ಕಲುಷಿತ ನೀರಿನಿಂದ ಭರ್ತಿಯಾದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.

ವರದಿಯಲ್ಲಿ ಅಕಾಲಿಕ ಮಳೆಗೆ ತಹಶೀಲ್ದಾರ ಕಚೇರಿ ಜಲಾವೃತವಾಗಿದ್ದು ಮುಂಗಾರು ಮಳೆ ಆರಂಭವಾದಲ್ಲಿ ಅಧಿಕಾರಿಗಳೇ ತಹಶೀಲ್ದಾರ ಕಚೇರಿ ತೊರೆಯುವ ಪರಿಸ್ಥಿತಿ ಎದುರಾಗುವ ಲಕ್ಷಣಗಳಿದ್ದು ಬೇಸಿಗೆಯಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿತ್ತು.

ಸದ್ಯ ಈ ಸುದ್ಧಿ ನೋಡಿ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಜೆಸಿಬಿ ಮೂಲಕ ಕಚೇರಿಯಲ್ಲಿ ಸಂಗ್ರಹವಾದ ನೀರನ್ನು ಒಂದೇಡೆ ಸಂಗ್ರಹಿಸಿ ಮೋಟಾರು ಯಂತ್ರದ ಮೂಲಕ ಹೊರಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದರಿಂದ ನಿತ್ಯ ತಹಶೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಸಮತೋಲನ ವಾತಾವರಣ ದೊರೆಯಲಿದೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Kshetra Samachara

Kshetra Samachara

6 days ago

Cinque Terre

69.77 K

Cinque Terre

2

  • Shivanand GK Shivu
    Shivanand GK Shivu

    ಜೋರ್ ಮಳಿ ಬಂಧ ಮನ್ಯಾಗ ನೀರ್ ಹೊಕ್ರ ಯಾರು ಬಂಧ ಕೆಳುದಿಲ್ಲ ..ಈಗ ನಿಮ್ ಆಫೀಸ್ ಹೆಂಗ್ ಕ್ಲೀನ್ ಮಾದ್ದಕಟ್ಟಿರಿ

  • Manjunath.B.Harijan(vithalapur)
    Manjunath.B.Harijan(vithalapur)

    ನಮ್ಮ ತಾಲೂಕ ನಮ್ಮ ಹೆಮ್ಮೆ