ನವಲಗುಂದ : ಎರಡನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಬಸ್ ನಿಲ್ದಾಣ ಖಾಲಿ ಖಾಲಿ

ನವಲಗುಂದ : ಎರಡನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರಕ್ಕೆ ನವಲಗುಂದ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿ ಕಂಡು ಬಂದದ್ದಲ್ಲದೆ, ಪ್ರಯಾಣಿಕರು ಸಹ ಬಸ್ ನಿಲ್ದಾಣದತ್ತ ಬಂದಿರಲಿಲ್ಲ.

ಹೌದು ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಮುಷ್ಕರದ ಎರಡನೇ ದಿನವೂ ಬಸ್ ಗಳು ರಸ್ತೆಗೆ ಇಳಿದಿರಲಿಲ್ಲ, ಅಷ್ಟೇ ಅಲ್ಲದೇ ಸಾರ್ವಜನಿಕರು ಸಹ ಖಾಸಗಿ ವಾಹನಗಳ ಮೊರೆ ಹೋಗಿದ್ದರು. ಈ ಹಿನ್ನಲೆ ಎರಡನೇ ದಿನವೂ ಪಟ್ಟಣದ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ದವಾಗಿತ್ತು.

Kshetra Samachara

Kshetra Samachara

10 days ago

Cinque Terre

40.62 K

Cinque Terre

0