ಹುಬ್ಬಳ್ಳಿ: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ...!
ಹುಬ್ಬಳ್ಳಿ: ರಾಜ್ಯಾದ್ಯಂತ ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರ ಎರಡನೇ ದಿನ ಕಾಲಿಟ್ಟಿದ್ದು,ಇಂದು ಕೂಡ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿಯದೇ ಇರುವುದು ಕಂಡುಬಂದಿದೆ. ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕರಿಗಂತೂ ಸಂಕಷ್ಟ ತಂದೊಡ್ಡಿದೆ.
ಹೌದು...ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬಹುತೇಕ ಸಾರ್ವಜನಿಕರು ಬಸ್ ಸೌಕರ್ಯಗಳನ್ನು ನಂಬಿಕೊಂಡು ತಮ್ಮ ದೈನಂದಿನ ಜೀವನ ನಡೆಸುತ್ತಿದ್ದಾರೆ.ಆದರೂ ಕೂಡ ಸಾರಿಗೆ ನೌಕರರು ಮಾತ್ರ ಮುಷ್ಕರವನ್ನು ಹಿಂಪಡೆಯದೇ ಹೋರಾಟಕ್ಕೆ ಮುಂದಾಗಿದ್ದಾರೆ.
ಇವೆಲ್ಲದರ ನಡುವೆಯಲ್ಲಿ ಮತ್ತೆ ಖಾಸಗಿ ಬಸ್ಸುಗಳಿಗೆ ಸಾರಿಗೆ ಅಧಿಕಾರಿಗಳು ಮೊರೆ ಹೋಗಬೇಕಾಗಿದೆ. ಅಲ್ಲದೇ ನಿನ್ನೆಯಂತೆ ಇಂದು ಕೂಡ ಹುಬ್ಬಳ್ಳಿ- ಗದಗ ಹುಬ್ಬಳ್ಳಿ- ಬೆಳಗಾವಿ ಹುಬ್ಬಳ್ಳಿ- ಧಾರವಾಡ ಮಧ್ಯೆ ಖಾಸಗಿ ಬಸ್ ಸಂಚಾರ ಪ್ರಾರಂಭ ಮಾಡಿವೆ.
ಇನ್ನೂ ಖಾಸಗಿ ಬಸ್ ಕಾರ್ಯಾಚರಣೆ ನಡೆವೆಯೂ ಅಧಿಕಾರಿಗಳು ಕೆಲವು ಸಾರಿಗೆ ನೌಕರರ ಮನವೊಲಿಸಿ
ಸಾರಿಗೆ ಮುಷ್ಕರದ ನಡುವೆಯೇ ಎರಡು ಬಸ್ಸುಗಳನ್ನು ಕರೆತಂದಿದ್ದಾರೆ. ಹುಬ್ಬಳ್ಳಿ-ಕಾರವಾರ ನಡೆವೆ ಮತ್ತು ಹುಬ್ಬಳ್ಳಿ-ಗದಗ ನಡುವೆ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚಾರ ಆರಂಭಿಸಿವೆ.ಬಸ್ಸುಗಳು ಆಗಮಿಸುತ್ತಿದ್ದಂತೆ ಖಾಸಗಿ ಬಸ್ಸುಗಳನ್ನು ಬಿಟ್ಟು ಜನರು ಸಾರಿಗೆ ಬಸ್ಸುಗಳತ್ತ ಮುಖ ಮಾಡಿದ್ದಾರೆ.