ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
ನವಲಗುಂದ : ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಇರುವ ಈ ಮೂತ್ರಾಲಯದ ಒಳಗಡೆ ಹೋಗೋದಿರ್ಲಿ, ಅತ್ತ ಹಾದು ಹೋಗಲು ಸಹ ಆಗದ ಪರಿಸ್ಥಿತಿ ಇಲ್ಲಿನ ಗ್ರಾಮಸ್ತರಿಗೆ ಬಂದೊದಗಿದೆ. ಆದರೆ ಏನು ಮಾಡ್ತೀರಿ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಗೆ ಇಲ್ಲಿಂದ ಬರುವ ದುರ್ವಾಸನೆ ಬಡಿತಾನೆ ಇಲ್ವೇನೋ ಅನಿಸುತ್ತೆ.
ಹೌದು ಈ ಮೂತ್ರಾಲಯ ಬ್ಲಾಕ್ ಆಗಿ, ಕೊಳಚೆ ಅಲ್ಲೇ ತಾಂಡವ ಆಡ್ತಾ ಇದೆ. ಅದರಲ್ಲಿ ಕುಡಿದು ಬಿಸಾಡಿದ ಮಧ್ಯಪಾನದ ಪಾಕೇಟ್ ಗಳು ಬೇರೆ, ಇದನ್ನೆಲ್ಲಾ ನೋಡ್ತಾ ಇದ್ರೆ ಇಲ್ಲಿ ಕುಡಕರ ಹಾವಳಿ ಸಹ ಹೆಚ್ಚಿನ ಪ್ರಮಾಣದಲ್ಲಿದೆ. ಇಂತಹ ಸ್ಥಳದಲ್ಲಿ ಮಧ್ಯಪಾನ ಮಾಡೋದನ್ನ ತಡೆಯುವವರು ಸಹ ಯಾರು ಇಲ್ಲದಂತಾಗಿ ಹೋಗಿದೆ ಅನಿಸದೆ ಇರದು. ಅಷ್ಟೇ ಅಲ್ಲದೇ ಈ ಮೂತ್ರಲಯದ ಆಸುಪಾಸು ಅಂಗನವಾಡಿ ಮತ್ತು ಶಾಲೆ ಇದೆ, ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗಿದೆ. ಇನ್ನು ಈ ಬಗ್ಗೆ ಗ್ರಾಮಸ್ತರು ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು ಸಹ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಈ ಕೂಡಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಜನಪ್ರತಿನಿದಿನಗಳು ಈ ಸಮಸ್ಯೆಯನ್ನು ಬಗೆ ಹರಿಸಿ, ಸೂಕ್ತ ನಿರ್ವಹಣೆ ಮಾಡುವಲ್ಲಿ ಮುಂದಾಗಬೇಕಿದೆ.
Kshetra Samachara
27/02/2021 05:18 pm