ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭವನ್ನು ಸದ್ಬಳಿಕೆ ಮಾಡಿಕೊಂಡ ನೈಋತ್ಯ ರೈಲ್ವೆ ವಲಯ ಕಾಮಗಾರಿ ಚುರುಕುಗೊಳಿಸಿ ನಿರೀಕ್ಷೆಗೂ ಮುನ್ನವೇ ಕಾರ್ಯವನ್ನು ಪೂರ್ಣಗೊಳಿಸಿದೆ.
ಹೌದು..ನೈಋತ್ಯ ರೈಲ್ವೆ ವಲಯದ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನೈಋತ್ಯ ರೈಲ್ವೆ ವಲಯ ಲಾಕ್ ಡೌನ್ ವೇಳೆ ಸಂಪೂರ್ಣ ರೈಲ್ವೆ ಸಂಚಾರ ಸ್ಥಗಿತಗೊಂಡ ಬೆನ್ನಲ್ಲೇ ಇಂತಹ ಮಹತ್ವಪೂರ್ಣ ಕಾರ್ಯವನ್ನು ಪೂರ್ಣಗೊಳಿಸಿದೆ.
ನೈಋತ್ಯ ರೈಲ್ವೆ ವಲಯದ ಇಂಟರ್ ಲಾಕಿಂಗ್ ಕಾರ್ಯಪೂರ್ಣಗೊಂಡಿದ್ದು,ಇಂದು ಶ್ರೀಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಎಸ್.ಡಬ್ಲೂ.ಆರ್ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಪರಿಶೀಲನೆ ನಡೆಸಿ ಇಂಟರ್ ಲಾಕಿಂಗ್ ಸೇವೆಗೆ ಚಾಲನೆ ನೀಡಿದರು.
Kshetra Samachara
25/02/2021 05:01 pm