ಕುಂದಗೋಳ : ಹಳ್ಳಿಗಳ ಅಭಿವೃದ್ಧಿಗೆ ಸುಸುಜ್ಜೀತ ರಸ್ತೆಗಳೇ ಪೂರಕ ನೋಡಿ. ಯಾಕಪ್ಪಾ ಅಂದ್ರಾ ಈ ಗ್ರಾಮೀಣ ಜನರ ಸಂಚಾರಕ್ಕೆ ಕೃಷಿ ಚಟುವಟಿಕೆಗೆ ನಿತ್ಯ ಸಾರಿಗೆ ಸಂಚಾರ ಸರಕು ಸಾಗಾಟ ಎಲ್ಲದಕ್ಕೂ ರಸ್ತೆ ಬೇಕೆ ಬೇಕು.
ಆದರೆ ಇಂತಹ ಆಧುನಿಕ ಯುಗದಲ್ಲೂ ಕುಂದಗೋಳ ತಾಲೂಕಿನ ಕೆಲವು ಹಳ್ಳಿಗಳಿಗೆ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ. ಅದೇ ಹಳೇ ಡಾಂಬರು ಕಿತ್ತೋಗಿ ಕಲ್ಲುಗಳ ರಾಶಿ ತುಂಬಿರುವ ರಸ್ತೆಯಲ್ಲಿ ನಿತ್ಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಇದೋ ಕುಬಿಹಾಳ ಗ್ರಾಮದಿಂದ ವಿಠ್ಠಲಾಪುರಕ್ಕೆ ಸಂಪರ್ಕ ಕಲ್ಪಿಸುವ 5 ಕಿಲೋ ಮೀಟರ್ ರಸ್ತೆ ಪರಿಸ್ಥಿತಿ ನೋಡಿ ಈ ಹಾಳಾದ ರಸ್ತೆ ಮೇಲೆ ನಿತ್ಯ ಜನ ಸಂಚಾರ ಯಥಾವತ್ತಾಗಿ ಇದ್ರೂ ಈ ರಸ್ತೆಗೆ ಡಾಂಬರ್ ಭಾಗ್ಯ ಒದಗಿ ಬಂದಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಸದಸ್ಯರನ್ನು ಕೇಳಿದ್ರೆ ಅತಿವೃಷ್ಟಿ ಪ್ರವಾಹ ಕಾಮಗಾರಿಯಲ್ಲಿ ಈ ರಸ್ತೆ ಅಭಿವೃದ್ಧಿ ಮಾಡ್ತಿವಿ ಅಂತಾರೇ.
ಒಟ್ಟಾರೆ ಪುನಃ ಮಳೆಗಾಲ ಆರಂಭದ ಮೊದಲು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ನಿತ್ಯ ಹಳ್ಳಿಗರು ಸಂಚರಿಸುವ ಈ ರಸ್ತೆಗೆ ಡಾಂಬರ್ ಭಾಗ್ಯ ಕಲ್ಪಿಸಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ..
Kshetra Samachara
24/02/2021 12:08 pm