ಲಕ್ಷ್ಮೇಶ್ವರ: ತಾಲೂಕಿನ ಅತ್ಯಂತ ಪುಟ್ಟ ಗ್ರಾಮ ಎಂದರೆ ಮುನಿಯನ ತಾಂಡಾ ಆದರೆ ಇಲ್ಲಿ ಈ ತಾಂಡಾದ ಜನರು ದಿನನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಹೊಲಸು ನೀರಿನಿಂದ ಎಷ್ಟೋ ಸೊಳ್ಳೆಗಳು ಉದ್ಭವವಾಗುತ್ತಿದೆ. ಇದರಿಂದ ದಿನಾಲೂ ಸೊಳ್ಳೆಗಳ ಮದ್ಯೆವೇ ಜೀವನ ಮಾಡುತ್ತಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವು ಬರಿ ವೋಟ್ ಬ್ಯಾಂಕಗೊಸ್ಕರ ಇದೆ ಏನೂ ಅನ್ನುವುದರಲ್ಲಿ ಡೌಟ್ ಇಲ್ಲ. ರವಿವಾರ ಶಾಸಕ ರಾಮಣ್ಣ ಲಮಾಣಿಯವರು ಅಂಗನವಾಡಿ ಭೂಮಿಪೂಜೆಗೆ ಈ ಗ್ರಾಮಕ್ಕೆ ಬಂದಿದರಿಂದ ಅವರಿಗೆ ತಾಂಡದ ಜನರು ತಾಂಡದ ಎಲ್ಲ ಗಲೀಜ್ ಇರುವ ಜಾಗೆಗಳನ್ನು ತೋರಿಸಿದರು.
ನಮಗೆ ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದೇ ಮನೆಯ ಮುಂದೆನೇ ನೀರು ನಿಂತು. ಆ ನೀರು ನೀಲಿ ರೂಪಕ್ಕೆ ಬಂದಿದೆ ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಹಾಗೂ ಚಿಕ್ಕ ಮಕ್ಕಳು ಮನೆಯ ಮುಂದಿನ ನೀರಿನಲ್ಲಿ ಆಟವಾಡುವಂತಾಗಿದೆ ವೃದ್ಧರಂತು ಹೊರಗೆ ಬರುವಂತ್ತಿಲ್ಲ. ಅಷ್ಟೊಂದು ಗಲೀಜದಿಂದ ಕೊಡಿದೆ ಎಂದು ತಾಂಡದ ಜನರು ರಾಮಣ್ಣ ಲಮಾಣಿಗೆ ವಿವರಿಸಿ ಹೇಳಿದರು. ನಮಗೆ ಸರಿಯಾದ ರಸ್ತೆಯಿಲ್ಲ ಸರಿಯಾದ ಚರಂಡಿ ಇಲ್ಲ ಇಲ್ಲಿ ಮಾತ್ರ ಒಂದು ಕೆಲಸ ಆಗಿಲ್ಲ ಎಂದು ರಾಮಣ್ಣ ಲಮಾಣಿಗೆ ತರಾಟೆಗೆ ತೆಗೆದುಕೊಂಡರು ನಂತರ ಶಾಸಕ ರಾಮಣ್ಣ ಲಮಾಣಿಯವರು ಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ಕೊಟ್ಟರು.
Kshetra Samachara
22/02/2021 03:19 pm