ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಗ್ರಾಮ ಸಹಾಯಕರ ವೇತನ ಹೆಚ್ಚಳ ಒತ್ತಾಯಿಸಿ ಶಾಸಕರಿಗೆ ಮನವಿ

ಕಲಘಟಗಿ:ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ವೇತನವನ್ನು 2021ರ ಆಯವ್ಯಯ (ಬಜೆಟ್) ‌ದಲ್ಲಿ ಕನಿಷ್ಠ ವೇತನ 21000 ರೂಪಾಯಿ ಹೆಚ್ಚಳ‌ ಮಾಡುವಂತೆ ಒತ್ತಾಯಿಸಿ ಕಲಘಟಗಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಶಾಸಕ ಸಿ ಎಂ ನಿಂಬಣ್ಣವರಗೆ ಮನವಿ ಅರ್ಪಿಸಿದರು.

ರಾಜ್ಯದಲ್ಲಿ 10450 ಜನ ಗ್ರಾಮ ಸಹಾಯಕರಿದ್ದು,ಮಾಸಿಕ ವೇತನ 12 ಸಾವಿರ ರೂಪಾಯಿಗಳಿದ್ದು,ಇದರ ಹೊರತಾಗಿ ಯಾವುದೇ‌ ವಿಶೇಷ ಭತ್ಯೆ ಹಾಗೂ ಸೇವಾಭದ್ರತೆ ಇಲ್ಲ. ಕಡಿಮೆ ವೇತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.ಕಾರಣ ಈ ಬಾರಿಯ ಆಯ್ಯಯದಲ್ಲಿ 21 ಸಾವಿರ ರೂಗೆ ವೇತನ ಹೆಚ್ಚಳ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ‌ಮಾಡುವಂತೆ ಶಾಸಕ ಸಿ ಎಂ ನಿಂಬಣ್ಣವರ ಅವರನ್ನು ಗ್ರಾಮ ಸಹಾಯಕರು‌ ಮನವಿ ನೀಡಿ ಒತ್ತಾಯಿಸಿದರು.

Edited By : Nirmala Aralikatti
Kshetra Samachara

Kshetra Samachara

19/02/2021 04:02 pm

Cinque Terre

12.03 K

Cinque Terre

1

ಸಂಬಂಧಿತ ಸುದ್ದಿ